ಕಲಬುರಗಿ: ಜಿಲ್ಲೆಯ ಚಿಂಚೋಳಿಯ ಹೊಸಳ್ಳಿ (ಎಚ್) ಗ್ರಾಮದ ರೈತರ ಜಮೀನಿನಲ್ಲಿ ಬೃಹತ್ ಆಕಾರದ ನಿಗೂಢ ಬಲೂನ್ ಪತ್ತೆಯಾಗಿದೆ.
ಎಲ್ಲಿಂದಲ್ಲೋ ಆಗಸದಿಂದ ಹಾರಿ ಬಂದು ರೈತರ ಜಮೀನಿನಲ್ಲಿ ಆವರಿಸಿರುವ ಬೃಹತ್ ಬಲೂನ್ ಸುಮಾರು ಒಂದು ಎಕರೆ ಪ್ರದೇಶದಷ್ಟು ವಿಶಾಲವಾಗಿದೆ. ಈ ಅನಾಮಧೇಯ ಪ್ಲಾಸ್ಟಿಕ್ ಬಲೂನ್ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ವಿಚಾರ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
Advertisement
ಇದರ ಮಾಹಿತಿ ಪಡೆದ ಚಿಂಚೋಳಿ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಲೂನ್ ಬಗ್ಗೆ ಯಾವ ಅಧಿಕಾರಿಗಳಿಗೂ ಸಹ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಬಲೂನ್‍ನಲ್ಲಿ ಯಾವುದೇ ಅಕ್ಷರಗಳು ಸಹ ಮುದ್ರಣವಾಗಿಲ್ಲ. ಹೀಗಾಗಿ ಈ ಬಲೂನ್ ಯಾರಿಗೆ ಸೇರಿದ್ದು? ಇಲ್ಲಿಗೆ ಬಂದಿದ್ದು ಹೇಗೆ? ಯಾರಾದರೂ ಬಲೂನ್ ಬಳಸಿ ಸಂಶೋಧನೆ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
Advertisement
ಬಲೂನ್ ಮೂಲಕ ಕೆಲವೊಂದು ಕಂಪೆನಿಗಳು ಸಂಶೋಧನೆ ನಡೆಸುತ್ತಿವೆ. ವಿಶೇಷವಾಗಿ ಇಂಟರ್‍ನೆಟ್ ದಿಗ್ಗಜ ಗೂಗಲ್ ‘ಪ್ರೊಜೆಕ್ಟ್ ಲೂನ್’ ಹೆಸರಿನಲ್ಲಿ ಬಲೂನ್ ಮೂಲಕ ಇಂಟರ್‍ನೆಟ್ ನೀಡಲು ಮುಂದಾಗುತ್ತಿದೆ. ನ್ಯೂಜಿಲೆಂಡ್ ನಲ್ಲಿ ಮೊದಲ ಪ್ರಯೋಗ ನಡೆದಿದ್ದು, ಹಲವು ದೇಶಗಳ ಜೊತೆ ಗೂಗಲ್ ಇಂಟರ್‍ನೆಟ್ ಒದಗಿಸಲು ಒಪ್ಪಂದ ಮಾಡಿಕೊಂಡಿದೆ.