ನವದೆಹಲಿ: ಬಾಲಿವುಡ್ ನಟ, ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ (Kokilaben Hospital in Mumbai) ದಾಖಲಾಗಿದ್ದು, ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಹೃದಯಾಘಾತ ಸಂಭವಿಸಿದಾಗ ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಲು ಸಲಹೆ ನೀಡುತ್ತಾರೆ. ಆದರೆ ಅಮಿತಾಬ್ ಬಚ್ಚನ್ ಅವರ ಕಾಲಿನ ಸಮಸ್ಯೆಯಿದ್ದು, ಹೀಗಾಗಿ ಕಾಲಿಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
Advertisement
ಏನಿದು ಚಿಕಿತ್ಸೆ..?: ಬಾಹ್ಯ ಆಂಜಿಯೋಪ್ಲ್ಯಾಸ್ಟಿ (Angioplasty) ಎಂದರೆ ಅಪಧಮನಿಯ ಹೊರಭಾಗದಲ್ಲಿ ರಕ್ತ ನಾಳಗಳನ್ನು ತೆರೆಯಲು ಆಂಜಿಯೋಪ್ಲ್ಯಾಸ್ಟಿ ವೈದ್ಯಕೀಯ ಬಲೂನ್ ಅನ್ನು ಬಳಸಲಾಗುತ್ತದೆ. ಹೃದಯದಂತೆ ದೇಹದ ಇತರ ಭಾಗಗಳಲ್ಲಿಯೂ ಸಮಸ್ಯೆ ಕಂಡುಬಂದಾಗ ಅಥವಾ ರಕ್ತದ ಹರಿವು ಸರಿಯಾಗಿಲ್ಲದಿದ್ದಾಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ರಕ್ತನಾಳಗಳನ್ನು ಅಗಲಗೊಳಿಸಲು ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಚಿಕಿತ್ಸೆಯು ರಕ್ತವು ಸರಿಯಾಗಿ ಹರಿಯುವಂತೆ ಮಾಡುತ್ತದೆ. ಹಾಗೆಯೇ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ.
Advertisement
ಹೃದಯದ ಹೊರತಾಗಿ, ಸೊಂಟದ ಅಪಧಮನಿ, ತೊಡೆಯ ಅಪಧಮನಿ, ಮೊಣಕಾಲಿನ ಹಿಂದಿನ ಅಪಧಮನಿ, ಕೆಳ ಕಾಲಿನ ಅಪಧಮನಿಗೂ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ.
Advertisement
Advertisement
ಲಕ್ಷಣಗಳೇನು..?: ನಡೆಯುವಾಗ ಕಾಲುಗಳಲ್ಲಿ ನೋವು, ಸ್ನಾಯು ಸೆಳೆತ, ಕಾಲಿನ ಸೆಳೆತ, ಮರಗಟ್ಟುವಿಕೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಬಿಗ್ ಬಿ: ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ನಟ ಅಮಿತಾಭ್ ಬಚ್ಚನ್
ವೈದ್ಯರ ಪ್ರಕಾರ, ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ರಕ್ತವು ಸರಿಯಾಗಿ ಹರಿಯುವುದಿಲ್ಲ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ, ರಕ್ತನಾಳಗಳಲ್ಲಿ ತೊಂದರೆ ಉಂಟಾಗುತ್ತದೆ. ಹೃದಯದ ಅಪಧಮನಿಗಳಲ್ಲಿ ಈ ಸಮಸ್ಯೆ ಕಂಡುಬಂದರೆ, ಎದೆನೋವು ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ ಕಾಡುತ್ತದೆ. ವಿಪರೀತವಾಗಿ ಬೆವರಲು ಆರಂಭವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಿರ್ಲಕ್ಯ ಮಾಡದೇ ರೋಗಿಯನ್ನು ತಕ್ಷಣವೇ ಚಿಕಿತ್ಸೆಗೆ ಒಳಪಡಿಸಬೇಕು.