ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರ ಪ್ರವಾಹಕ್ಕೆ 51 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಅಮಿತಾಬ್ ಬಚ್ಚನ್ ತಾವು ದೇಣಿಗೆ ನೀಡಿದ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ವಿಷಯವನ್ನು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ತಿಳಿಸಿದ್ದಾರೆ.
Advertisement
ದೇವೇಂದ್ರ ಫಡ್ನವಿಸ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಮಹಾರಾಷ್ಟ್ರ ಪ್ರವಾಹಕ್ಕೆ 51 ಲಕ್ಷ ರೂ. ಸಹಾಯಧನ ನೀಡಿದ್ದಕ್ಕೆ ಬಿಗ್ – ಬಿ ಅಮಿತಾಬ್ ಬಚ್ಚನ್ ಅವರಿಗೆ ಧನ್ಯವಾದಗಳು. ಕೊಲ್ಹಾಪುರ, ಸಾಂಗ್ಲಿ ಹಾಗೂ ಸತಾರಾದಂತಹ ಪ್ರವಾಹ ಪೀಡಿತ ಪ್ರದೇಶಗಳಿಗೆ ನಮ್ಮ ಪುರ್ನವಸತಿ ಪ್ರಯತ್ನಗಳಿಗೆ ಸಹಾಯ ಮಾಡಲು ಮತ್ತು ಕೊಡುಗೆ ನೀಡಲು ಇದು ಅನೇಕರಿಗೆ ಪ್ರೇರಣೆ ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
Advertisement
Thank you Amitabh Bachchan ji for your gesture of coming forward & contributing ₹51,00,000 towards #CMReliefFund #MaharashtraFloods
This will inspire many to help & contribute in our rehabilitation efforts for flood affected dists like Kolhapur, Sangli and Satara.@SrBachchan
— Devendra Fadnavis (@Dev_Fadnavis) August 19, 2019
Advertisement
ಕಳೆದ ತಿಂಗಳು ಅಮಿತಾಬ್ ಬಚ್ಚನ್ ಅವರು ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ 51 ಲಕ್ಷ ರೂ. ದಾನ ಮಾಡಿದ್ದರು. ಈ ಬಗ್ಗೆ ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಅವರು ಟ್ವಿಟ್ಟರಿನಲ್ಲಿ, “ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂ. ಕೊಡುಗೆ ನೀಡಿದ್ದಕ್ಕಾಗಿ ಅಮಿತಾಬ್ ಅವರನ್ನು ಪ್ರಶಂಸಿಸುತ್ತೇವೆ. ಜನರ ಪರ ನಿಮಗಿರುವ ಕಾಳಜಿ ಗೊತ್ತಾಗುತ್ತದೆ. ನಿಮ್ಮ ಬೆಂಬಲಕ್ಕೆ ಅಸ್ಸಾಂ ಜನತೆಯ ಪರವಾಗಿ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
Advertisement
We appreciate Shri Amitabh Bachchan ji for contributing Rs. 51 lakh to Chief Minister's Relief Fund. This is a great gesture & show of care for the people.
Thank you, on behalf of the people of Assam, for your support. @SrBachchan
— Sarbananda Sonowal (@sarbanandsonwal) July 23, 2019
ಅಮಿತಾಬ್ ಅಲ್ಲದೆ ನಟ ನಾನಾ ಪಾಟೇಕರ್ ಅವರು ಕೂಡ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 500 ನಿವಾಸಗಳನ್ನು ಕಟ್ಟಿಕೊಡುವ ಭರವಸೆಯನ್ನು ನೀಡಿದ್ದಾರೆ. ಇತ್ತೀಚೆಗೆ ನಟ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಸಿಎಂ ದೇವೇಂದ್ರ ಅವರು ತಮ್ಮ ಟ್ವಿಟ್ಟರಿನಲ್ಲಿ, “ಮಹಾರಾಷ್ಟ್ರ ಪ್ರವಾಹಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಜೆನಿಲಿಯಾ ಹಾಗೂ ರಿತೇಶ್‍ಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದರು.
Thank you Riteish and Genelia Deshmukh for the contribution of ₹25,00,000/- (₹25 lakh) towards #CMReliefFund for #MaharashtraFloods !
@Riteishd @geneliad pic.twitter.com/Y6iDng2epD
— Devendra Fadnavis (@Dev_Fadnavis) August 12, 2019