ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

Public TV
2 Min Read
CET 3

ಶಿವಮೊಗ್ಗ/ಬೀದರ್‌: ಸಿಇಟಿ ಪರೀಕ್ಷೆ ವೇಳೇ ಅಮಾನವೀಯ ಘಟನೆ ನಡೆದಿದೆ. ಜನಿವಾರ (Janivara) ಹಾಕಿದ್ದಕ್ಕೆ ಸಿಬ್ಬಂದಿ ಪರೀಕ್ಷೆಗೆ ಅವಕಾಶ ಕೊಡದೇ ಇರುವ ಘಟನೆ ಶಿವಮೊಗ್ಗ (Shivamogga) ಮತ್ತು ಬೀದರ್‌ ಜಿಲ್ಲೆಗಳಲ್ಲಿ ನಡೆದಿದೆ.

ಪರೀಕ್ಷಾ ಸಿಬ್ಬಂದಿ ವರ್ತನೆಗೆ ಬ್ರಾಹ್ಮಣ ಸಂಘಟನೆಗಳು (Brahmin Organisation) ತೀವ್ರ ಆಕ್ರೋಶ ಹೊರಹಾಕಿವೆ. ಈ ಬಗ್ಗೆ ವರದಿ ಪಡೆಯೋದಾಗಿ ಕೆಇಎ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ – ಮೋದಿಯನ್ನು ಭೇಟಿಯಾಗಿ ಧನ್ಯವಾದ ಹೇಳಿದ ಮುಸ್ಲಿಮರು

CET 2

ಏನಿದು ಘಟನೆ?
ಸಿಇಟಿ ಪರೀಕ್ಷೆಗಾಗಿ (CET Exam) ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ ಸಿಇಟಿ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಕಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ತೆಗೆಸಿ ಹಾಕಿರುವುದು ಮಕ್ಕಳ ಪೋಷಕರಿಂದ ತಿಳಿದು ಬಂದಿದೆ. ಈ ಕೇಂದ್ರದಲ್ಲಿ ಈ ರೀತಿ ಗಾಯತ್ರಿ ಮಂತ್ರ ದೀಕ್ಷೆ ಪಡೆದು ಅಕ್ಕ ಸಾಕ್ಷರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿದ ಅವಮಾನಕಾರಿ ಘಟನೆ ಅಧಿಕಾರಿಗಳು ಮಾಡಿದ್ದು ಖಂಡನೀಯ ಎಂದು ಬ್ರಾಹ್ಮಣ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: Mangaluru| ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ ಪತ್ತೆ – ಗ್ಯಾಂಗ್ ರೇಪ್ ಯತ್ನ ಶಂಕೆ, ಮೂವರು ಅರೆಸ್ಟ್

CET

ವರ್ಷಪೂರ್ತಿ ಕಷ್ಟ ಪಟ್ಟು ಅಧ್ಯಯನ ಮಾಡಿ ಒಳ್ಳೆ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಛಿಸುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದೆ. ಅಖಿಲ ಕನರ್ನಾಟಕ ಬ್ರಾಹ್ಮಣ ಮಹಾ ಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ವಿಶ್ವ ಸಂಘಟನೆಗೆ ಒಕ್ಕೂಟವು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿಂದು ಬೃಹತ್‌ ಪ್ರತಿಭಟನೆ – ಉಲೇಮಾ ಸಮಿತಿ ಕರೆ

ಜಿಲ್ಲಾಧಿಕಾರಿಗಳು ತಕ್ಷಣ ತನಿಖೆ ನಡೆಸಿ ಹಿಂದೂ ಪರಂಪರೆಯ ಸಂಸ್ಕಾರವಾದ ಗಾಯತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯತೆ. ಘನತೆ ಗೌರವ ಗೊತ್ತಿಲ್ಲದ ಧರ್ಮ ವಿರೋದಿ ಕೃತ್ಯ ಎಸಗಿರುವ ಹೀನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ತಮ್ಮಣ್ಣ ಏನಂತಿಸುತ್ತೇವೆ. ಇದನ್ನೂ ಓದಿ: ವರದಕ್ಷಿಣೆ ಹಣ ತರುವಂತೆ ಪತಿ ಮನೆಯವ್ರಿಂದ ಕಿರುಕುಳ ಆರೋಪ – ಮಹಿಳೆ ಆತ್ಮಹತ್ಯೆ

Share This Article