ಬೀದರ್: ಉಗ್ರವಾದ ಎಂಬುದು ಕ್ಯಾನ್ಸರ್ ಇದ್ದಂತೆ, ಹೀಗಾಗಿ ಉಗ್ರರನ್ನು ಸೃಷ್ಟಿ ಮಾಡುವಂತಹ ದೇಶಗಳನ್ನು ಮೊದಲು ನಿರ್ನಾಮ ಮಾಡಬೇಕು ಎಂದು ಬೀದರ್‌ನ ತಡೋಳ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ (Shivacharya Swamiji) ಹೇಳಿದ್ದಾರೆ.
ಸಿಎಂ ಹೇಳಿಕೆ ವಿಚಾರವಾಗಿ ಅವರು ವೀಡಿಯೋ ಬಿಡುಗಡೆ ಮಾಡಿದ್ದಾರೆ. ವೀಡಿಯೋದಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಈ ದೇಶದಲ್ಲಿ ಜ್ಞಾನಿಗಳು, ಚಿಂತಕರು ಇಲ್ಲಿರುವುದಿಲ್ಲ, ಸ್ವಾರ್ಥಿಗಳು ಅಧಿಕಾರಕ್ಕೆ ಬರ್ತಾರೆ ಅಂತಾ ಲಾರ್ಡ್ ವಿಲಿಯಂ ಬೆಂಟಿಕ್ ಅಂದೇ ಹೇಳಿದ್ದರು. ನಮ್ಮ ಮುಖ್ಯಮಂತ್ರಿಗಳಿಗೆ ಬಹಳ ಕರುಣೆ ಇದ್ದು ಮುಖ್ಯಮಂತ್ರಿಗಳಿಗಿರುವ ಕರುಣೆ ಇನ್ಯಾರಿಗೂ ಇಲ್ಲ ಬಿಡಿ. ಸತ್ತವರು ವಾಪಾಸ್ ಬರಲ್ಲ ನಿಜ, ಸತ್ತವರು ಬರಲ್ಲ ಅಂತ ಬಿಟ್ಟರೆ ನಾಳೆ ನಿಮ್ಮನೆಗೂ ಉಗ್ರರು ಬರ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧ ಬೇಡವೇ ಬೇಡ ಅಂತಾ ಹೇಳಿಲ್ಲ: ಉಲ್ಟಾ ಹೊಡೆದ ಸಿಎಂ
ಈ ಬಗ್ಗೆ ಪ್ರಧಾನಿ ಮೋದಿಯವರು ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಇಂಥಾ ದೇಶಗಳನ್ನು ಇಡೀ ಭೂಪಟದಿಂದ ಸ್ವಚ್ಛ ಮಾಡಿದ್ರೆ ಪಾಪವೇನಿಲ್ಲ. ಭಾರತ ಶಾಂತಿದೂತ ದೇಶ, ಇವರಿಗೇನು ಮಾಡಿದ್ರೂ ಕೇಳೋರಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಘಟನೆಗಳು ನಡೆದಾಗ ಅವರಿವರ ಮೇಲೆ ಆರೋಪ ಮಾಡುವುದು ಸರಿಯಾದ ಬೆಳವಣಿಗೆ ಅಲ್ಲ. ಇಂತಹ ಸಮಯದಲ್ಲಿ ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತನೆ ಮಾಡಬೇಕು, ಪಕ್ಷ, ಪಾರ್ಟಿ ಎಂಬ ದೊಡ್ಡ ರೋಗ ಈ ದೇಶಕ್ಕೆ ಅಂಟಿಕೊಂಡಿದ್ದು, ಇವರಿಗೆ ದೇಶವೇ ಕಾಣಿಸುತ್ತಿಲ್ಲ ಎಂದು ರಾಜಕಾರಣಿಗಳ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪಾಕ್ ಮುಂದೆಂದೂ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ತಕ್ಕ ಪಾಠ ಕಲಿಸಬೇಕಿದೆ: ಸಿದ್ದರಾಮಯ್ಯ