ಬೀದರ್: ದೇವರ ದರ್ಶನ ಪಡೆದು ವಾಪಸಾಗುತ್ತಿದ್ದಾಗ ಆಟೋಗೆ ಲಾರಿ ಡಿಕ್ಕಿಯಾಗಿ ಮಹಾರಾಷ್ಟ್ರ (Maharashtra) ಮೂಲದ ನಾಲ್ವರು ಸಾವನ್ನಪ್ಪಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಮನ್ನಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-65 (National Highway-65) ರಲ್ಲಿ ನಡೆದಿದೆ.
ಪ್ರಮಿಳಾ (32), ಆಟೋ ಚಾಲಕ ಸುನೀಲ್ ಜಗದಾಳೆ (35), ಅನುಷಾ ಬಾಯಿ (65) ಹಾಗೂ ಪೂಜಾ ಜಾದವ್ (40) ಮೃತ ದುರ್ದೈವಿಗಳು. 8 ಜನ ಪ್ರಯಾಣಿಸುತ್ತಿದ್ದ ಆಟೋದಲ್ಲಿ 4 ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಿ – ಕರ್ನಾಟಕಕ್ಕೆ CWRC ಆದೇಶ
Advertisement
Advertisement
ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮೂಲದ 8 ಜನ ಬಸವಕಲ್ಯಾಣ ತಾಲೂಕಿನ ಚಂಡಕಾಪೂರ್ ಗ್ರಾಮದ ಬಳಿಯ ಐತಿಹಾಸಿಕ ಅಮೃತ ಕುಂಡ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಈ ಕುರಿತು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೇಶದ ಸಾಫ್ಟ್‌ವೇರ್ ರಫ್ತಿನಲ್ಲಿ 40% ಕರ್ನಾಟಕದ್ದು, ನಾವೇ ನಂಬರ್ 1: ಪ್ರಿಯಾಂಕ್ ಖರ್ಗೆ
Advertisement
Web Stories