ಬೀದರ್: ಅನ್ನಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಲೆಂದು ಅಕ್ರಮವಾಗಿ ಅನ್ಯ ರಾಜ್ಯಕ್ಕೆ ಸಾಗಿಸುವಾಗ ಜಪ್ತಿಯಾಗಿದೆ.
ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಲಾರಿ ಸಹಿತ 25 ಟನ್ ಅಕ್ಕಿ ವಶಪಡಿಸಿಕೊಂಡ ಫಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ. ಅಕ್ಕಿ ತುಂಬಿದ ಲಾರಿಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65-ರ ಚಂಡಕಾಪೂರ ಸಮೀಪ ದಾಳಿ ಮಾಡಿ ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಆಹಾರ ಇಲಾಖೆ ಶಿರಸ್ತೇದಾರ ರಾಮರತನ ದೇಗಲೆ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, 7.5 ಲಕ್ಷ ಮೌಲ್ಯದ 250 ಕ್ವಿಂಟಾಲ್ (25 ಟನ್) ಅಕ್ಕಿ ಸಹಿತ ಲಾರಿ ಜಪ್ತಿ ಮಾಡಿ. ಗುಜರಾತಿನ ಜಾಮ್‍ನಗರ ಮೂಲದ ಲಾರಿ ಚಾಲಕ ಭೋವನ್ ವಘೇಲಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.