ಬೀದರ್: ವಿವಿಧ ಬ್ರ್ಯಾಂಡ್‌ಗಳ ನಕಲಿ ಪಾನ್‌ಮಸಾಲಾ (Pan Masala) ತಯಾರಿಸುತ್ತಿದ್ದ ಅನಧಿಕೃತ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 66 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.
ಹುಮ್ನಾಬಾದ್ (Humnabad) ತಾಲೂಕಿನ ಹುಡಗಿ (Hudgi) ಗ್ರಾಮದ ಬಳಿ ನಕಲಿ ಗುಟ್ಕಾ ತಯಾರಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ 1,600 ಕೆಜಿ ಪಾನ್‌ಮಸಾಲಾ ಕಚ್ಚಾ ವಸ್ತು, ಗುಟ್ಕಾ ಪ್ಯಾಕೆಟ್ ತಯಾರಿಸುತ್ತಿದ್ದ 11 ಯಂತ್ರಗಳು ಹಾಗೂ ಬೀದರ್‌ನಿಂದ ಮಹಾರಾಷ್ಟ್ರಕ್ಕೆ (Maharashtra) ಅಕ್ರಮ ಸಾಗಾಟ ಮಾಡಲು ಬಳಸುತ್ತಿದ್ದ 5 ಲಾರಿಗಳನ್ನು ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು – ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ
Advertisement
Advertisement
ಖಚಿತ ಮಾಹಿತಿ ಮೇರೆಗೆ ಬೀದರ್ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಅವರ ಮಾರ್ಗದರ್ಶನದಲ್ಲಿ ಹುಮ್ನಾಬಾದ್ ಪೊಲೀಸರು ನಕಲಿ ಗುಟ್ಕಾ ಘಟಕದ ಮೇಲೆ ದಾಳಿ ನಡೆಸಿದ್ದು, ಭರ್ಜರಿ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಐಪಿಎಲ್ ಬೆಟ್ಟಿಂಗ್ ಹಣಕ್ಕಾಗಿ ಯುವಕನ ಕೊಲೆ
Advertisement