ಬೀದರ್: ಹೈದರಾಬಾದ್‍ನಲ್ಲಿ ಬೀದರ್ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ರಾತ್ರೋ ರಾತ್ರಿ ಅಂತ್ಯಕ್ರಿಯೆ ನಡೆಸಲಾಗಿದೆ. 62 ವಯಸ್ಸಿನ ಬೀದರ್ ಮೂಲದ ವ್ಯಕ್ತಿ ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಮೃತ ವ್ಯಕ್ತಿ ದೆಹಲಿ ಜಮಾತ್‍ನಿಂದ ಬೀದರ್‍ಗೆ ವಾಪಸ್ಸಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಮೊದಲ ಎರಡು ವರದಿಗಳು ನೆಗೆಟಿವ್ ಬಂದಿದ್ದರಿಂದ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಮನೆಯಲ್ಲಿ ಮತ್ತೆ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾದಾಗ ಕುಟುಂಬಸ್ಥರು ವ್ಯಕ್ತಿಯನ್ನು ಹೈದರಾಬಾದ್‍ಗೆ ಕರೆದೊಯ್ದಿದ್ದರು. ಅಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.
ಹೀಗಾಗಿ ಮೃತದೇಹವನ್ನು ಮತ್ತೆ ಬೀದರ್ ಗೆ ರವಾನಿಸಿದ್ದು, ಕೊರೊನಾ ನಿಬಂಧನೆಯಂತೆ ಅಂತ್ಯಕ್ರಿಯೆ ನೆರವೇರಸಲಾಗಿದೆ. ಅಂತ್ಯಕ್ರಿಯೆಯ ವೇಳೆ 15 ಮಾತ್ರ ಭಾಗಿಯಾಗಿದ್ದು, ಮೂರನೇ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.