ಬೀದರ್: ಪ್ರವಾಸಕ್ಕಾಗಿ ಬಂದಿದ್ದ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಅನುಭವ ಮಂಟಪದ ಯಾತ್ರಿ ನಿವಾಸದ ಬಳಿ ನಡೆದಿದೆ.
ಮೈಸೂರು ನಗರದ ಟಿಎನ್ ಪುರ ಬಡಾವಣೆ ನಿವಾಸಿ ಎ.ಕೆ. ಶಿವರಾಜ ಕುನ್ನುಮಾದಪ್ಪ (64) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಫೆ.1 ರಂದು ತಮ್ಮ ಗೆಳೆಯ ಜೈಶಂಕರ್ ಜೊತೆಗೂಡಿ ಮನೆಯಿಂದ ಹೊರಟ ಇವರು ಕಲಬುರ್ಗಿ, ಬೀದರ್ ಪ್ರವಾಸ ಮುಗಿಸಿಕೊಂಡು ಸೋಮವಾರ ಸಂಜೆ ಇಲ್ಲಿಯ ಅನುಭವ ಮಂಟಪಕ್ಕೆ ಬಂದು ಯಾತ್ರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು.
Advertisement
Advertisement
ಮಧ್ಯರಾತ್ರಿ ಬಾತ್ ರೂಂಗೆಂದು ತೆರಳಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹೃದಯಾಘತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಸುದ್ದಿ ತಿಳಿದ ನಗರ ಠಾಣೆ ಪಿಎಸ್‍ಐ ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.