ಬೀದರ್: ಪರಿಸರ ಸ್ನೇಹಿ ವಾಹನಗಳನ್ನು ಬೀದರ್‍ನ ನಗರಸಭೆ ಅಧಿಕಾರಿಗಳು ತಂದಿದ್ದಾರೆ. ಆದರೆ ನಗರದ ಕಸದ ವಿಲೇವಾರಿಗಾಗಿ ತಂದಿರುವ ಈ ವಾಹನಗಳನ್ನು ನಗರಸಭೆ ಅಧಿಕಾರಿಗಳು ಉಪಯೋಗ ಮಾಡದೆ ತುಕ್ಕು ಹಿಡಿಸುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ 20 ಲಕ್ಷ ಖರ್ಚು ಮಾಡಿ 10 ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನಗಳನ್ನು ತಂದಿದ್ದಾರೆ. ಎರಡು ವರ್ಷಗಳಿಂದ ಅವುಗಳನ್ನು ಉಪಯೋಗ ಮಾಡದೆ ತುಕ್ಕು ಹಿಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಯಾರಿಗೂ ಕಾಣದಂತೆ ನಗರಸಭೆ ಆವರಣದ ಮೂಲೆಯೊಂದರಲ್ಲಿ ಅವುಗಳನ್ನು ನಿಲ್ಲಿಸಿದ್ದಾರೆ.
Advertisement
Advertisement
10 ಗಾಡಿಗಳ ಬ್ಯಾಟರಿ ಸೇರಿದಂತೆ ಬಹುತೇಕ ಗಾಡಿಯ ಭಾಗಗಳು ತುಕ್ಕು ಹಿಡಿವೆ. ಸರ್ಕಾರದ ಬೋಕ್ಕಸಕ್ಕೆ ನಷ್ಟು ಉಂಟು ಮಾಡಿದ್ದು, ಈ ಮೂಲಕ ನಗರಸಭೆ ಅಧಿಕಾರಿಗಳು ಗೋಲ್‍ಮಾಲ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.