ಬೀದರ್: ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಜಿದ್ದಾಜಿದ್ದಿನ ಲೋಕಸಭಾ ಕ್ಷೇತ್ರ ಬೀದರ್ (Bidar). 1989 ರವರೆಗೂ ಬೀದರ್ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ನಂತರ ಬಿಜೆಪಿ ಕಡೆ ತಿರುಗಿತು. ಮತ್ತೆ 2004, 2009 ರ ಅವಧಿಯಲ್ಲಿ ಕಾಂಗ್ರೆಸ್‌ಗೆ ಹೋಯಿತು. ಈಗ ಬಿಜೆಪಿ ಹಿಡಿತದಲ್ಲಿದೆ. ಒಂದರ್ಥದಲ್ಲಿ ಬೀದರ್ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರತಿಷ್ಠೆಯ ಕ್ಷೇತ್ರವಾಗಿದೆ.
ಕ್ಷೇತ್ರ ಪರಿಚಯ
ಬೀದರ್ 1962 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು 2008 ರ ವರೆಗೆ ಪರಿಶಿಷ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿತ್ತು. ರಾಮಚಂದ್ರ ವೀರಪ್ಪ ಎಂಬ ಸಂಸದರು ಒಟ್ಟು 7 ಬಾರಿ ಗೆದ್ದು ಬಂದು ಇತಿಹಾಸ ನಿರ್ಮಿಸಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದ ಹಾಗೂ ಐದು ಬಾರಿ ಬಿಜೆಪಿಯಿಂದ ಗೆದ್ದು ಇತಿಹಾಸ ಬರೆದಿದ್ದಾರೆ. ಮೂರು ಬಾರಿ ಕಾಂಗ್ರೆಸ್‌ನಿಂದ ನರಸಿಂಗರಾವ್ ಸೂರ್ಯವಂಶಿ ಎಂಬ ಸಂಸದರು ಬೀದರ್‌ನಿಂದ ಸಂಸತ್ ಪ್ರವೇಶ ಮಾಡಿದ್ದಾರೆ. 2009ರಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಬಿಜೆಪಿ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪ್ಪಳಿ ವಿರುದ್ಧ ಗೆದ್ದು ಬೀದರ್ ಲೋಕಸಭೆಯಿಂದ ಪಾರ್ಲಿಮೆಂಟ್‌ಗೆ ಪ್ರವೇಶ ಮಾಡಿದ್ದಾರೆ. ಆದರೆ 2014ರಲ್ಲಿ ಮಾಜಿ ಸಿಎಂ ಎನ್ ಧರ್ಮಸಿಂಗ್ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ವಿರುದ್ಧ 92 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತು ಭಾರಿ ಮುಖಭಂಗ ಅನುಭವಿಸಿದ್ರು. 2019ರಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ವಿರುದ್ಧ 1,16,834 ಮತಗಳ ಅಂತರದಿಂದ ಬಿಜೆಪಿಯ ಭಗವಂತ್ ಖುಬಾ ಜಯಭೇರಿ ಬಾರಿಸಿದ್ರು. 2014 ಹಾಗೂ 2019 ರಲ್ಲಿ ಮೋದಿ ಅಲೆಯಲ್ಲಿ ಗೆದ್ದು ಬೀಗಿರುವ ಖೂಬಾ ಬೀದರ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. ಇದನ್ನೂ ಓದಿ: Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್ ಗಿಟ್ಟಿಸಿ ಹ್ಯಾಟ್ರಿಕ್ ನಗೆ ಬೀರ್ತಾರಾ ಕರಂದ್ಲಾಜೆ?
Advertisement
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಬೀದರ್ ಲೋಕಸಭಾ ಕ್ಷೇತ್ರದಲ್ಲಿ (Lok Sabha Elections 2024) ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇವೆ. ಬೀದರ್ ಉತ್ತರ, ಬೀದರ್ ದಕ್ಷಿಣ, ಭಾಲ್ಕಿ, ಹುಮ್ನಾಬಾದ್, ಔರಾದ್, ಬಸವಕಲ್ಯಾಣ ಜೊತೆಗೆ ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಚಿಂಚೊಳಿ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
Advertisement
ಒಟ್ಟು ಮತದಾರರು ಎಷ್ಟು?
ಬೀದರ್ ಲೋಕಸಭಾ ಕ್ಷೇತ್ರ 1962 ರಲ್ಲಿ ರಚನೆಯಾಯಿತು. ಈ ಕ್ಷೇತ್ರದಲ್ಲಿ ಒಟ್ಟು 18,570,25 ಮತದಾರರು ಇದ್ದಾರೆ. ಪುರುಷರು – 9,54,449 ಹಾಗೂ ಮಳೆಯರು – 9,02,576 ಸೇರಿದಂತೆ ಒಟ್ಟು 18,57,025 ಮತದಾರರಿದ್ದಾರೆ. ಇದನ್ನೂ ಓದಿ: Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ
Advertisement
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಭಗವಂತ್ ಖೂಬಾ (Bhagwanth Khuba) ಎರಡನೆಯ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅಂದಿನ ಕೆಪಿಸಿಸಿ ಕಾರ್ಯಾಧ್ಯಕ್ಷರು ಈಗಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಭಗವಂತ್ ಖೂಬಾ ವಿರುದ್ಧ ಸೋತ್ರು. 1,16,834 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿ ಭಗವಂತ್ ಖೂಬಾ, ಈಶ್ವರ್ ಖಂಡ್ರೆಯನ್ನು ಸೋಲಿಸಿ ಎರಡನೇ ಬಾರಿಗೆ ಪಾರ್ಲಿಮೆಂಟ್ ಪ್ರವೇಶ ಮಾಡಿದ್ರು. ಭಗವಂತ್ ಖೂಬಾ 5,85,471 ಲಕ್ಷ ಮತಗಳನ್ನು ಗಳಿಸಿ ಗೆದ್ರೆ ಈ ಕಡೆ 4,68,637 ಮತಗಳನ್ನು ಗಳಿಸಿ ಖಂಡ್ರೆ ಪರಾಜಿತರಾಗಿದ್ರು.
ಈ ಬಾರಿಯ ಆಕಾಂಕ್ಷಿಗಳು ಯಾರು?
2019 ರಲ್ಲಿ ಜಿಲ್ಲೆಯ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ಹೈಕಮಾಂಡ್ ಸೂಚನೆಯಂತೆ ಭಗವಂತ್ ಖುಬಾ ವಿರುದ್ಧ ಸ್ಪರ್ಧೆ ಮಾಡಿದ್ರು. ಈಶ್ವರ್ ಖಂಡ್ರೆಗೆ ಕಾಂಗ್ರೆಸ್ ಶಾಸಕರಾಗಿದ್ದ ರಹೀಂಖಾನ್, ರಾಜಶೇಖರ್ ಪಾಟೀಲ್ ಹಾಗೂ ಬಿ ನಾರಾಯಣ್‌ರಾವ್ ಸಾಥ್ ನೀಡಿದ್ರು. ಆದ್ರೆ ಈ ಸಲ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಬಿಜೆಪಿಯಿಂದ ಮತ್ತೆ ಕೇಂದ್ರ ಸಚಿವರು, ಹಾಲಿ ಸಂಸದ ಭಗವಂತ್ ಖೂಬಾಗೆ ಟಿಕೆಟ್ ಫಿಕ್ಸ್ ಎನ್ನಲಾಗಿದೆ. ಆದರೂ ಬಿಜೆಪಿಯಲ್ಲಿ ಗುರುನಾಥ್ ಕೊಳ್ಳೂರು, ಈಶ್ವರ್ ಸಿಂಗ್ ಠಾಕೂರ್, ಚನ್ನಬಸವಣ್ಣ ಬಳತೆ, ಡೋಣಗಾಪೂರ್ ಸ್ವಾಮೀಜಿ ಸೇರಿದಂತೆ ಸಾಲು ಸಾಲು ಆಕ್ಷಾಂಕ್ಷಿಗಳು ಲೋಕಸಭೆಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡಲು ರೆಡಿಯಾಗಿದ್ದಾರೆ. ಟಿಕೆಟ್ ವಿಚಾರವಾಗಿ ಬಿಜೆಪಿಯಲ್ಲಿ ಒಳಜಗಳವಿದೆ. ಖೂಬಾ ಅವರಿಗೆ ಟಿಕೆಟ್ ನೀಡಬಾರದು ಎಂದು ಸ್ವಪಕ್ಷದ ಶಾಸಕರೇ ಬಿಜೆಪಿ ನಾಯಕರಲ್ಲಿ ಹಕ್ಕೊತ್ತಾಯ ಮಂಡಿಸಿದ್ದರು. ಇತ್ತ ಕಾಂಗ್ರೆಸ್‌ನಿಂದ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ಹೆಸರು ಸದ್ಯ ಕೇಳಿ ಬರುತ್ತಿದೆ. ಒಂದು ವೇಳೆ ಭಗವಂತ್ ಖೂಬಾಗೆ ಟಿಕೆಟ್ ಸಿಕ್ಕರೆ ಸಚಿವ ಈಶ್ವರ್ ಖಂಡ್ರೆ ಕೇಂದ್ರ ಸಚಿವರನ್ನು ಮಣಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಈ ಬಾರಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾಗಿರುವುದರಿಂದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಕೂಡಾ ಬಿಜೆಪಿಗೆ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ
ಖೂಬಾ ಪಾರುಪತ್ಯ
2014 ರಲ್ಲಿ ಪತಂಜಲಿಯ ಯೋಗ ಗುರು ಖ್ಯಾತಿಯ ರಾಮಬಾಬಾದೇವರಿಂದಾಗಿ ಭಗವಂತ್ ಖೂಬಾಗೆ ಅಂದು ಟಿಕೆಟ್ ಸಿಕ್ಕಿತ್ತು. ಮೋದಿ ಅಲೆಯಲ್ಲಿ ಖೂಬಾ ಗೆದ್ದು ಬಂದ್ರು. ಅಂದು ಎದುರಾಳಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್‌ರನ್ನು ಬರೋಬ್ಬರಿ 92 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿ ಹೊಸ ಇತಿಹಾಸ ಬರೆದಿದ್ರು. ಖೂಬಾ ಎರಡನೆಯ ಬಾರಿಗೂ ಜಿಲ್ಲೆಯ ಪ್ರಭಾವಿ ನಾಯಕ ಈಶ್ವರ್ ಖಂಡ್ರೆಯನ್ನು ಸೋಲಿಸಿದ್ರು. ಎರಡನೆಯ ಬಾರಿ ಗೆದ್ದು ಬೀಗಿದ ಖೂಬಾಗೆ ಗಡಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ. ಕೇಂದ್ರ ಸಚಿವರಾದ ಬಳಿಕ ಕೇಂದ್ರದ ಘಟಾನುಘಟಿ ನಾಯಕರ ಸಂಪರ್ಕ ಪಡೆದಿರುವ ಖೂಬಾ ಸದ್ಯ ಪ್ರಭಾವಿ ಬಿಜೆಪಿ ನಾಯಕರಾಗಿ ಬೆಳೆದು ನಿಂತಿದ್ದಾರೆ. ರಾಜ್ಯದ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡುವ ಏಕೈಕ ಬಿಜೆಪಿ ನಾಯಕ ಅಂದ್ರೆ ಅದು ಖೂಬಾ.
ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಲಾಭ?
ಎರಡು ಬಾರಿ ಬಿಜೆಪಿ ಪಕ್ಷ ಹಾಗೂ ಮೋದಿ ಬಲದ ಮೇಲೆ ಗೆದ್ದು ಬರುತ್ತಿರುವ ಖೂಬಾಗೆ ಈ ಬಾರಿ ಜೆಡಿಎಸ್ ಮೈತ್ರಿಯಿಂದ ವರದಾನವಾಗಲಿದೆ. ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಪ್ರಭಾವಿ ಕುರುಬ ಹಾಗೂ ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ. ಸಹಜವಾಗಿ ಜೆಡಿಎಸ್‌ಗೆ ಹೋಗುತ್ತಿದ್ದ ಜಿಲ್ಲೆಯ ಕುರುಬ ಮತಗಳು ಹಾಗೂ ಹಿಂದುಳಿದ ಮತಗಳು ಬಿಜೆಪಿ ಕಡೆ ಮುಖ ಮಾಡಲಿವೆ. ಬೀದರ್ ದಕ್ಷಿಣದಲ್ಲಿ ಬಂಡೆಪ್ಪ ಖಾಶೆಂಪೂರ್, ಹುಮ್ನಾಬಾದ್‌ನಲ್ಲಿ ಸಿಎಂ ಫೈಜ್ ಹಾಗೂ ಬೀದರ್ ಉತ್ತರದಲ್ಲಿ ಸೂರ್ಯಕಾಂತ್ ನಾಗಮಾರಪಳ್ಳಿ ಸೇರಿದಂತೆ ಜಿಲ್ಲೆಯಲ್ಲಿ ಜೆಡಿಎಸ್ ನಾಯಕರ ದಂಡೇ ಇದೆ. ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಕಾರ್ಯಕರ್ತರ ಪಡೆ ಇದ್ದು, ಅಲ್ಪಸಂಖ್ಯಾತರು ಜೆಡಿಎಸ್ ಕೈ ಹಿಡಿಯಲಿದ್ದಾರೆ. ಹೀಗಾಗಿ ಕೈ ವಿರುದ್ಧ ಬೀದರ್‌ನಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದ ಬಿಜೆಪಿಗೆ ಜೆಡಿಎಸ್ ಮೈತ್ರಿಯಿಂದ ಆನೆ ಬಲ ಬಂದಂತಾಗಿದೆ. ಇದನ್ನೂ ಓದಿ: ಬರಗಾಲದಲ್ಲಿ ಗ್ಯಾರಂಟಿ ಸಮಾವೇಶ – ಸಿಎಂ ವಿರುದ್ಧ ಹೆಚ್‍ಡಿಕೆ ಕೆಂಡ
ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
2004 – ರಾಮಚಂದ್ರ ವೀರಪ್ಪ: 23,621 ಅಂತರದಿಂದ ಗೆಲುವು (ಬಿಜೆಪಿ)
2004 – ನರಸಿಂಗರಾವ್ ಸೂರ್ಯವಂಶಿ: 13,470 ಮತಗಳ ಅಂತರದ ಗೆಲುವು (ಕಾಂಗ್ರೆಸ್): ರಾಮಚಂದ್ರ ವೀರಪ್ಪ ನಿಧನದಿಂದಾಗಿ ಬೈ ಎಲೆಕ್ಷನ್
2009 – ಎನ್ ಧರ್ಮಸಿಂಗ್ (ಮಾಜಿ ಮುಖ್ಯಮಂತ್ರಿಗಳು) 39,619 ಮತಗಳ ಅಂತರದಿಂದ ಗೆಲವು (ಕಾಂಗ್ರೆಸ್)
2014 – ಭಗವಂತ್ ಖೂಬಾ: 92,192 ಮತಗಳ ಅಂತರದಿಂದ ಗೆಲುವು (ಬಿಜೆಪಿ)
2019 – ಭಗವಂತ್ ಖೂಬಾ (ಕೇಂದ್ರ ಸಚಿವರು) 1,16,834 ಮತಗಳ ಅಂತರದಿಂದ ಗೆಲುವು (ಬಿಜೆಪಿ)
ಕ್ಷೇತ್ರದ ಜಾತಿವಾರು ಲೆಕ್ಕಾಚಾರ
ಲಿಂಗಾಯತರು: 5.20 ಲಕ್ಷ
ಎಸ್ಸಿ ಹಾಗೂ ಎಸ್ಟಿ: 4.10 ಲಕ್ಷ
ಅಲ್ಪಸಂಖ್ಯಾತರು: 3.40 ಲಕ್ಷ
ಹಿಂದುಳಿದ ವರ್ಗಗಳು: 2.50 ಲಕ್ಷ
ಮರಾಠ: 1.5 ಲಕ್ಷ
ಇತರೆ: 1.8 ಲಕ್ಷ