ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಉದ್ದೇಶಿಸಿ ಪೀರಪ್ಪ ಹೇಳಿದ್ದ ‘ಹೌದು ಹುಲಿಯಾ’ ಡೈಲಾಗ್ ಈಗ ಸ್ವಾಮೀಜಿಗಳನ್ನೂ ಬಿಟ್ಟಿಲ್ಲ. ಬೀದರ್ ಜಿಲ್ಲೆ ಬಸವಕಲ್ಯಾಣದ ಯಲ್ಲದಗುಂಡಿ ಜಾತ್ರಾ ಮಹೋತ್ಸವದಲ್ಲಿ ಆಶೀರ್ವಚನ ನೀಡುತಿದ್ದ ಹಿರನಾಗಾವ್‍ನ ಜಯಶಾಂತಲಿಂಗ ಸ್ವಾಮೀಜಿಗಳಿಗೂ ಜನ ‘ಹೌದು ಹುಲಿಯಾ’ ಅಂದಿದ್ದಾರೆ.
ಶ್ರೀ ಪರಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದಲ್ಲಿ ನಡೆದ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಹಿರನಾಗಾಂವನ ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿಗಳು, ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಆಶೀರ್ವಚನ ನೀಡುತ್ತಿದ್ದರು. ಇದನ್ನೂ ಓದಿ: ಪಾರ್ಟಿ ಮಾಡುತ್ತಾ ‘ಹೌದು ಹುಲಿಯಾ’ ಎಂದ ಚೀನಿಯರು
Advertisement
Advertisement
ಸ್ವಾಮೀಜಿಗಳ ಕೊನೆ ಭಾಷಣ ಆಗಿರುವ ಕಾರಣ ದೀರ್ಘವಾಗಿ ಭಾಷಣ ಮಾಡಬಾರದು. ಹಾಗೇನಾದರು ಮಾಡಿದರೆ ಜನರಿಗೆ ಬೇಜಾರಾಗುತ್ತದೆ ಎಂದು ಶ್ರೀಗಳು ಹೇಳಿದರು. ಈ ವೇಳೆ ವೇದಿಕೆಯ ಮುಂಭಾಗದಲ್ಲಿಯೇ ಕುಳಿತ್ತಿದ್ದ ವ್ಯಕ್ತಿಯೊಬ್ಬ ಜೋರಾದ ಧ್ವನಿಯಲ್ಲಿ ‘ಹೌದು ಹುಲಿಯಾ’ ಅಂತ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರೆಲ್ಲರೂ ನಗೆಗಡಲಲ್ಲಿ ತೇಲಿದ ಪ್ರಸಂಗ ನಡೆಯಿತು.
Advertisement
ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ `ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಪೀರಪ್ಪ `ಹೌದು ಹುಲಿಯಾ’ ಎಂದಿದ್ದರು. ಆ ಬಳಿಕ ಪೀರಪ್ಪ ಅವರ `ಹೌದು ಹುಲಿಯಾ’ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು. ಇದನ್ನೂ ಓದಿ: ‘ಹೌದು ಹುಲಿಯಾ’ ಡೈಲಾಗ್ ವೈರಲ್- ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ