ಬೀದರ್: ವಿದೇಶದಿಂದ ಬಂದಿದ್ದ ಗೆಳೆಯನ್ನು ಮಾತನಾಡಿಸಲು ಬಂದ ಯುಕನೋರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕೋಹಿನೂರ ಹಾಗೂ ವಿ.ಕೆ. ಸಲಗರ ಗ್ರಾಮದ ಮಧ್ಯೆ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಯುವಕನನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಮೊಹಮ್ಮದ್ ನಜೀಮೋದ್ದೀನ್ ಗೌಸೋದ್ದೀನ್ ಶೇಖ್ (26) ಎಂದು ಗುರುತಿಸಲಾಗಿದೆ. ವಿದೇಶದಿಂದ ಬಂದ ಸ್ನೇಹಿತನನ್ನು ಮಾತನಾಡಿಸಿಕೊಂಡು ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ.
ವಿದೇಶದಿಂದ ಆಗಮಿಸಿದ್ದ ಗೆಳೆಯನನ್ನು ಭೇಟಿ ಮಾಡಲೆಂದು ಇಂದು ಸಂಜೆ ವಿ.ಕೆ. ಸಲಗರ ಗ್ರಾಮಕ್ಕೆ ತೆರಳಿದ್ದ ಮೊಹಮ್ಮದ್ ನಜೀಮೋದ್ದೀನ್ ಗೌಸೋದ್ದೀನ್ ಶೇಖ್, ಗೆಳೆಯನೊಂದಿಗೆ ಮಾತನಾಡಿ ಮರಳಿ ಗ್ರಾಮಕ್ಕೆ ಹಿಂದಿರುಗುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಸೇತುವೆ ಕೆಳಗೆ ಬಿದಿದೆ. ಪರಿಣಾಮ ಶೇಖ್‍ಗೆ ಗಂಭೀರವಾದ ಗಾಯಗಳಗಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.