ಬೀದರ್: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು ಉಕ್ತಯನಲ್ಲಿ ಸಿಲುಕಿರುವ ಕನ್ನಡಿಗರು ಯಾವಾಗ ಏನಾಗುತ್ತೋ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಗಡಿ ಜಿಲ್ಲೆ ಬೀದರ್ ನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು ಅವರ ಪೋಷಕರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಮಕ್ಕಳಿಂದ ಪೋಷಕರು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದು ಸದ್ಯ ಪರಿಸ್ಥಿತಿ ಬಗ್ಗೆ ಪೋಷಕರು ಆಂತಕಗೊಂಡಿದ್ದಾರೆ. ಉಕ್ರೇನ್ ನೆಲ ಮಹಡಿಯಲ್ಲಿ ನಮ್ಮ ಮಕ್ಕಳು ವಾಸವಾಗಿದ್ದು, ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಆದಷ್ಟು ಬೇಗ ಸರ್ಕಾರ ನಮ್ಮ ಮಗನನ್ನು ಭಾರತಕ್ಕೆ ಕರೆದುಕೊಂಡು ಬಂದ್ರೆ ಒಳ್ಳೆಯದು, ಯಾಕೆಂದರೆ ನಮ್ಮ ಮಕ್ಕಳನ್ನು ನೋಡಬೇಕು ಅನಿಸುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: Russia-Ukraine Crisis: 4 ಬಸ್‍ಗಳಲ್ಲಿ 240 ವಿದ್ಯಾರ್ಥಿಗಳು ರೊಮೇನಿಯಾಗೆ ಶಿಫ್ಟ್
ಇತ್ತ ಉಕ್ರೇನ್ ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿನಿ ಜೊತೆ ಬಸವಕಲ್ಯಾಣ ತಹಶೀಲ್ದಾರ್ ವೀಡಿಯೋ ಕಾಲ್ ಮೂಲಕ ಮಾತನಾಡಿ ಅತ್ಮಸ್ಥೈರ್ಯ ತುಂಬಿದ್ದಾರೆ. ಬಸವಕಲ್ಯಾಣ ತಾಲೂಕಿನಲ್ಲಿ ನಾರಾಯಣಪೂರ್ ಗ್ರಾಮದ ವೈಷ್ಣವಿ ವಿಷ್ಣುರೆಡ್ಡಿ ಮನೆಗೆ ಭೇಟಿ ನೀಡಿದ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗಾರ ವೈಷ್ಣವಿ ಜೊತೆ ವೀಡಿಯೋ ಕಾಲ್ ನಲ್ಲಿ ಮಾತನಾಡಿದ್ರು. ಇದನ್ನೂ ಓದಿ: ನವಜಾತ ಶಿಶುಗಳಿಗೂ ಯುದ್ಧದ ಬಿಸಿ – ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದ ಹಾಲುಗಲ್ಲದ ಕಂದಮ್ಮಗಳು
ವೀಡಿಯೋ ಕಾಲ್ ಮಾಡಿದ ತಹಶೀಲ್ದಾರ್ ಗೆ ಉಕ್ರೇನ್ ನಲ್ಲಿರುವ ಸದ್ಯದ ಪರಿಸ್ಥಿತಿ ಬಗ್ಗೆ ವೈದ್ಯಕೀಯ ವಿದ್ಯಾರ್ಥಿನಿ ವೈಷ್ಣವಿ ವಿವರಣೆ ನೀಡಿದರು. ನೀವು ಒಂಥರಾ ಯೋಧರಿದ್ದಂತೆ, ಯಾವುದಕ್ಕೂ ಭಯಪಡೆಬೇಡಿ, ತಾಯ್ನಾಡಿಗೆ ನಿಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೆವೆ, ಯಾವ ಸಮಯದಲ್ಲಿ ಬೇಕಾದ್ರು ನನ್ನ ನಂಬರ್ ಗೆ ಫೋನ್ ಮಾಡಬಹುದು ಎಂದು ಹೇಳುವ ಮೂಲಕ ತಹಶೀಲ್ದಾರ್ ಧೈರ್ಯ ತುಂಬಿದ್ದಾರೆ.