ಬೀದರ್: ವೈಚಾರಿಕ ಕ್ರಾಂತಿಯ ಮೂಲಕ ಮಹಿಳೆಯರಿಗೆ ಸಮಾನತೆಯ ಸಂದೇಶ ಸಾರಲು ನೆಲೆ ಒದಗಿಸಿದ ಗಡಿ ಜಿಲ್ಲೆ ಬೀದರ್‌ನಲ್ಲೇ (Bidar) ಇಂದಿಗೂ ಸಮಾನತೆ ಆಶಯದ ಪರಿಕಲ್ಪನೆ ಈಡೇರಲು ಸಾಧ್ಯವಾಗಿಲ್ಲ.
ಸ್ವತಂತ್ರ್ಯ ಭಾರತದ ಆರಂಭದ ಮೂರು ಚುನಾವಣೆ (Election) ಹೊರುಪಡಿಸಿದರೆ ಯಾವ ಮಹಿಳಾ ಅಭ್ಯರ್ಥಿಯೂ ಸಹ ಕಲ್ಯಾಣ ನಾಡಿನಿಂದ ಚುನಾಯಿತರಾಗಿಲ್ಲ. ಟಿಕೆಟ್ ಹಂಚಿಕೆಯಲ್ಲೂ ಮಹಿಳಾ ಪ್ರಾತಿನಿಧ್ಯದ ಕೊರಗು ಅಂಟಿಕೊಂಡೇ ಬಂದಿದೆ.
Advertisement
ಮಹಿಳೆಯರಿಗೆ ಸಮಾನ ಸ್ಥಾನಮಾನದ ಕುರಿತು ಪ್ರತಿಪಾದಿಸಿದ ಬಸವ ಭೂಮಿಯಲ್ಲಿಯೇ ಇಂದಿಗೂ ಸ್ತ್ರೀಯರ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಎರಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಿಂದ ಇಲ್ಲಿಯವರೆಗೆ ಕೇವಲ ಇಬ್ಬರು ಮಹಿಳೆಯರು ಮಾತ್ರ ಗೆದ್ದಿದ್ದಾರೆ. ಇದನ್ನೂ ಓದಿ: ಮೊಹಮ್ಮದ್ ನಲಪಾಡ್ ವಿರುದ್ಧ ದೂರು ದಾಖಲು
Advertisement
Advertisement
ಬಸವಕಲ್ಯಾಣ (Basavakalyana) ಕ್ಷೇತ್ರದಿಂದ 1957 ಹಾಗೂ 1962ರಲ್ಲಿ ಅನ್ನಪೂರ್ಣಬಾಯಿ ಮತ್ತು ಹುಲಸೂರ (Hulasuru) ಕ್ಷೇತ್ರದಿಂದ (ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕೈಬಿಡಲಾಗಿದೆ) 1985ರಲ್ಲಿ ಶಿವಕಾಂತಾ ಚತುರೆ ಗೆಲುವು ಸಾಧಿಸಿದ್ದರು. ಜಿಲ್ಲೆಯಲ್ಲಿ 1989ರಿಂದ ಈಚೆಗೆ ಒಬ್ಬ ಮಹಿಳಾ ಅಭ್ಯರ್ಥಿಯೂ ವಿಧಾನಸಭೆ ಮತ್ತು ಇಲ್ಲಿಯವರೆಗೆ ಲೋಕಸಭೆಗೆ ಆಯ್ಕೆಯಾಗಿಲ್ಲ.
Advertisement
ಒಂದೆಡೆ ಕಣ್ಣಕ್ಕಿಳಿದ ಒಂದೆರೆಡು ಮಹಿಳಾ ಅಭ್ಯರ್ಥಿಗಳಿಗೆ ಮತದಾರರಿಂದ ಬೆಂಬಲವಿಲ್ಲ. ಮತ್ತೊಂದೆಡೆ ಅಭ್ಯರ್ಥಿಗಳು ಸಮಮರ್ಥರಾಗಿದ್ದರೂ ರಾಜಕೀಯ ಪಕ್ಷಗಳು ಅವರಿಗೆ ಟಿಕೆಟ್ ನೀಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ.
ಪರಭಾವಗೊಂಡ ಮಹಿಳಾ ಅಭ್ಯರ್ಥಿಗಳು
ಬೀದರ ವಿಧಾನಸಭೆ ಕ್ಷೇತ್ರದಿಂದ 1989ರಲ್ಲಿ ಮಸ್ತಾನಭಿ ಮೌಲನಭಿ ಪಕ್ಷೇತರ ಅಭ್ಯರ್ಥಿಯಾಗಿ, 2004ರಲ್ಲಿ ರಫತ್ ಮತೀನ್ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ, 2008ರಲ್ಲಿ ಜೆಡಿಎಸ್‍ನಿಂದ (JDS) ರಾಜಶ್ರೀ ಸ್ವಾಮಿ, ಭಾಲ್ಕಿ ಕ್ಷೇತ್ರದಿಂದ 1994ರಲ್ಲಿ ಬಿಎಎಸ್‍ಪಿಯಿಂದ ಶೋಭಾ ವಿಜಯ, ಹುಮನಾಬಾದ್ ಕ್ಷೇತ್ರದಿಂದ 2004ರಲ್ಲಿ ಶೋಭಾರ ರಾಣಿ, ಮೀಸಲು ಕ್ಷೇತ್ರವಾಗಿ ಹುಲಸೂರನಿಂದ 1962ರಲ್ಲಿ ಕಾಂಗ್ರೆಸ್‍ನಿಂದ ಸುಭದ್ರಾಬಾಯಿ, 1989ರಲ್ಲಿ ಆರ್‌ಪಿಐನಿಂದ ಗಂಗಮ್ಮ ಫುಲೆ, 1999ರಲ್ಲಿ ಪಕ್ಷೇತರರಾಗಿ ಎಚ್.ಮಹಾದೇವಿ, 2004ರಲ್ಲಿ ಪಕ್ಷೇತರರಾಗಿ ಶೋಭಾಬಾಯಿ ಬಿಜಾಪೂರೆ ಮತ್ತು ಬಸವಕಲ್ಯಾಣ ಕ್ಷೇತ್ರದಿಂದ 2008ರಲ್ಲಿ ಭಗಿರತಿ ಶಿವರಾಜ ಪಕ್ಷೇತರರಾಗಿ, 20013ರಲ್ಲಿ ಬಸವಕಲ್ಯಾಣದಿಂದ ಮಲ್ಲಮ್ಮ ಅಟ್ಟೂರ ಕೆಜೆಪಿಯಿಂದ (KJP) ಹಾಗೂ ಶಾಸಕ ನಾರಾಯಣರಾವ್ ಅಕಾಲಿಕ ನಿಧನದಿಂದ 2021 ರ ಮೇ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಪತ್ನಿ ಮಲ್ಲಮ್ಮ ಬಿ ನಾರಾಯಣರಾವ್ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಬೀದರ್ ದಕ್ಷಿಣದಿಂದ ಮೀನಾಕ್ಷಿ ಸಂಗ್ರಾಮ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದರು. ಆದರೆ, ಅಲ್ಪ ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದರು.
ಬೀದರ್ ದಕ್ಷಿಣದಿಂದ ಮತ್ತೊಮ್ಮೆ ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಹೆಸರು ಕೇಳಿ ಬಂದಿತ್ತು. ಆದರೆ ಶಾಸಕ ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆಯಿಂದ ಅದು ಸಹ ಕೈತಪ್ಪಿದೆ. ಮಹಿಳೆಯರಿಗೆ 50% ನಷ್ಟು ಪ್ರಾತಿನಿಧ್ಯ ಸಿಗಲೇಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಆದರೆ ರಾಜಕೀಯ ಪಕ್ಷಗಳಿಂದ ಮಹಿಳೆಯರಿಗೆ ಟಿಕೆಟ್ ಹಂಚಿಕೆಯಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಚುನಾವಣೆಯಲ್ಲಾದರೂ ಸಮಾನತೆಯ ಪರಿಕಲ್ಪನೆ ಈಡೇರುತ್ತದೆಯೇ ಕಾದು ನೋಡಬೇಕಾಗಿದೆ.
ಮನೋಭಾವ ಬದಲಾಗಲಿ
ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಪುರುಷ ಪ್ರಧಾನ ಪ್ರತಿನಿಧಿಗಳು ಈ ವಿಷಯದಲ್ಲಿ ಅಡ್ಡಗಾಲು ಹಾಕುತ್ತಿದ್ದಾರೆ. ಬಸವಣ್ಣನ ಸಮಾನತೆಯ ನೆಲದಲ್ಲಿ ಕೇವಲ ಇಬ್ಬರು ಮಹಿಳೆಯರು ಶಾಸಕರಾಗಿ ಆಯ್ಕೆಯಾಗಿರುವುದು ದುರ್ದೈವದ ಸಂಗತಿ. 50% ರಷ್ಟು ಮತದಾರರು ಮಹಿಳೆಯರಿದ್ದಾರೆ. ಆದರೆ ಟಿಕೆಟ್ ಕೊಡುವಲ್ಲಿ ಮಾತ್ರ ಮಹಿಳೆಯರಿಗೆ ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ ತೋರುತ್ತಿವೆ ಎಂದು ಜಿಲ್ಲೆಯ ಮಹಿಳೆಯರು ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಅನರ್ಹ