ಬೀದರ್: ಇಂದು ಜಿಲ್ಲೆಯ ಶಾಹಗಂಜ್ ಪ್ರದೇಶದ ಹನುಮಾನ್ ಮಂದಿರದ ಬಳಿ ನಡೆದ ಮಹಿಳೆಯರ ಡಬಲ್ ಮರ್ಡರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಕೊಲೆ ಮಾಡಿದ ಆರೋಪಿಯನ್ನು ದೇವಪ್ಪ ಎಂದು ಗುರುತಿಸಲಾಗಿದೆ. ಲಲಿತಮ್ಮ (45), ದುರ್ಗಮ್ಮ(60) ಎಂಬ ಇಬ್ಬರನ್ನು ಆರೋಪಿ ದೊಣ್ಣೆಯಿಂದ ಹೊಡದು ಕೊಲೆ ಮಾಡಿದ್ದಾನೆ. ದೇವಪ್ಪ ಹನುಮಾನ್ ದೇವಸ್ಥಾನದ ಕಳ್ಳತನಕ್ಕೆ ಸಂಚು ರೂಪಿಸಿದ್ದನಂತೆ. ಈ ವೇಳೆ ಬೆಳಗ್ಗೆ ವಾಕ್ ಬಂದ ಲಲಿತಮ್ಮ ಮತ್ತು ದುರ್ಗಮ್ಮ, ಯಾರು ನೀನು? ಇಲ್ಲಿ ಏನ್ ಮಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿ ಕಲ್ಲು ಮತ್ತು ದೊಣ್ಣೆಯಿಂದ ಇಬ್ಬರನ್ನು ಹೊಡೆದು ಕೊಲೆ ಮಾಡಿದ್ದಾನೆ.
ದೇವಸ್ಥಾನದ ಕಳ್ಳತನಕ್ಕೆ ಬಂದ ಆರೋಪಿ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಮಹಿಳೆಯರನ್ನು ಕೊಲೆ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆಯ ಬಳಿಕ ಪ್ರಕರಣದ ಸತ್ಯ ತಿಳಿಯಲಿದೆ ಎಂದು ಎಸ್‍ಪಿ ರವೀಂದ್ರ ಹೇಳಿದ್ದಾರೆ.
ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv