ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ಬಿಡಲಾಗುತ್ತಿದ್ದ ಅಪಾರ ಪ್ರಮಾಣದ ನೀರು ಬಂದ್ ಮಾಡಲಾಗಿದ್ದು, ಮಾಂಜ್ರಾನದಿಯ ದಡದಲ್ಲಿರುವ ಹೆಚ್ಚಿನ ರೀತಿಯ ಬೆಳೆಗಳನ್ನು ಕಳೆದುಕೊಳುತ್ತಿದ್ದ ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ಬಿಡಲಾಗುತ್ತಿದ್ದ 50 ರಿಂದ 60 ಸಾವಿರ ಕ್ಯೂಸೆಕ್ ನೀರು ಬಂದ್ ಆಗಿದ್ದು, ಬೀದರ್ ನ ಮಾಂಜ್ರಾನದಿ ದಡದಲ್ಲಿ ನೀರಿನ ಮಟ್ಟ ತಗ್ಗಿದೆ. ಧನ್ನೆಗಾಂವ್ ಜಲಾಶಯದಿಂದ ಹೆಚ್ಚಿನ ನೀರು ಮಾಂಜ್ರಾನದಿಗೆ ಬಿಡುಗಡೆಯಾಗಿದ್ದರೆ, ಹೆಚ್ಚಿನ ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದ ಮಾಂಜ್ರಾನದಿ ದಡದಲ್ಲಿರುವ ರೈತರು ಮಹಾ ಪ್ರವಾಹದಿಂದ ಬಚಾವಾಗಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್‍ನಲ್ಲೂ ಫೈನಲ್ ಆಗಿಲ್ಲ ಅಭ್ಯರ್ಥಿ ಹೆಸರು
ಮಹಾ ಮಳೆ, ಧನ್ನೆಗಾಂವ್ ಹಾಗೂ ಕಾರಂಜಾ ಜಲಾಶಯದ ಎಫೆಕ್ಟ್‍ನಿಂದಾಗಿ ಲಕ್ಷಾಂತರ ಬೆಳೆ ಕಳೆದುಕೊಂಡ ಬೀದರ್ ರೈತರು ಕಂಗಾಲಾಗಿದ್ದರು. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆ ಧನ್ನೆಗಾಂವ್ ಜಲಾಶಯದ ಎಲ್ಲ ಗೇಟುಗಳು ಬಂದ್ ಮಾಡಲಾಗಿದ್ದು, ಮಾಂಜ್ರಾನದಿ ದಡದಲ್ಲಿ ನೆರೆ ಇಳಿಕೆಯಾಗಿದೆ. ಇದನ್ನೂ ಓದಿ: ತುಕುಡೆ ಗ್ಯಾಂಗಿನ ನಾಯಕರ ಸಮಾಧಿ ಮೇಲೆ ಬಿಜೆಪಿ, ಸಂಘ ಬಲವಾಗಿ ಬೆಳೆದಿದೆ: ಸಿ.ಟಿ.ರವಿ
ಡ್ಯಾಮ್‍ನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗೆ ನೀರು ನುಗ್ಗಿತ್ತು. ಪರಿಣಾಮ ಉದ್ದು, ತೊಗರಿ, ಕಬ್ಬು ಬೆಳೆ ನೀರುಪಾಲಾಗಿತ್ತು.