ಬೀದರ್: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನ.26ರಂದು ನಡೆಯಲಿರುವ ಬೀದರ್ ಸಾಂಸ್ಕೃತಿಕ ಉತ್ಸವ-2025ರಲ್ಲಿ ಗಾಯಕ ವಿಜಯಪ್ರಕಾಶ್, ನಿರೂಪಕಿ ಅನುಶ್ರೀ, ನಟಿ ಅಮೂಲ್ಯ ಭಾಗಿಯಾಗಲಿದ್ದಾರೆ.
ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಬೀದರ್ ಸಾಂಸ್ಕೃತಿಕ ಉತ್ಸವ-2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನ.26ರಂದು ಸಾ.5 ಗಂಟೆಗೆ ನಡೆಯಲಿದೆ.ಇದನ್ನೂ ಓದಿ: ಪ್ರಭಾಸ್ ಕಲರ್ಫುಲ್ ಹಾಡಿಗೆ ಫ್ಯಾನ್ಸ್ ಫಿದಾ
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ (ನ.24) ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅವರು, ಈ ಉತ್ಸವದಲ್ಲಿ ಖ್ಯಾತ ಗಾಯಕ ವಿಜಯಪ್ರಕಾಶ್, ನಿರೂಪಕಿ ಅನುಶ್ರೀ, ಖ್ಯಾತ ನಟಿ ಅಮೂಲ್ಯ ಹಾಗೂ ಅಕ್ಕಮಹಾದೇವಿ ಚಲನಚಿತ್ರದ ನಟಿ ಸುಲಕ್ಷಾ ಖೈರಾ ಸೇರಿದಂತೆ ಹಲವರು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಂಪಿ ಉತ್ಸವ, ಕಿತ್ತೂರು ಉತ್ಸವ, ಮೈಸೂರು ಉತ್ಸವ ಮಾದರಿಯಲ್ಲಿ ಬೀದರ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಈ ಸಂಗೀತ ಸಂಜೆಯಲ್ಲಿ ಸ್ಥಳೀಯ ಕಲಾವಿದರಾದ ಶಿವಾನಿ ಸ್ವಾಮಿ, ರೇಖಾ ಅಪ್ಪಾರಾವ್ ಸೌದಿ ಸೇರಿದಂತೆ ಹಲವರಿಗೂ ಅವಕಾಶ ಕೊಡಲಾಗುತ್ತಿದೆ. ಕನ್ನಡ ಭಾಷೆ, ಗಡಿ ಮತ್ತು ಕನ್ನಡ ಸರ್ಕಾರಿ ಶಾಲೆಗಳು ಗಡಿಯಲ್ಲಿ ಅಳಿವಿನಂಚಿನಲ್ಲಿವೆ. ಈ ಕಾರಣಕ್ಕಾಗಿ ಕೇವಲ ಸಂಗೀತ ಮಾತ್ರವಲ್ಲ, ಅವುಗಳ ಜೊತೆಗೆ ಭಾಷೆ ಮತ್ತು ಕನ್ನಡ ಶಾಲೆಗಳನ್ನು ಉಳಿಸುವ ಕುರಿತು ಈ ಉತ್ಸವದಲ್ಲಿ ಚರ್ಚೆಯಾಗಲಿದೆ. ಆದ್ದರಿಂದ ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ 1 ಸಾವಿರ ರೂ. ಟಿಕೆಟ್ ಶುಲ್ಕ ಇಡಲಾಗಿದೆ. ತಾವೆಲ್ಲರೂ ತನು ಮನ ಧನದಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರತಿಪಾದಿಸಿದ್ದಾರೆ.ಇದನ್ನೂ ಓದಿ: ಗೀತಪ್ರಿಯ ಅಭಿನಯದ ‘ಅಪರಿಚಿತೆ’ ಚಿತ್ರದ ಟ್ರೈಲರ್ ರಿಲೀಸ್

