– ಮಹಿಳೆ, ಮತ್ತೊಬ್ಬ ಮಗನ ರಕ್ಷಣೆ
ಬೀದರ್: ಸಾಲಗಾರರ ಕಿರುಕುಳದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಕಾರಂಜಾ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಭಾಲ್ಕಿ ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
ಶಿವಮೂರ್ತಿ ಮಾರುತಿ (45), 8 ತಿಂಗಳ ಪುಟ್ಟ ಕಂದ ರಾಕೇಶ್, ಶ್ರೀಕಾಂತ್ (8) ಹಾಗೂ ರಿತಿಕ್ (4) ಸಾವನ್ನಪ್ಪಿದ ದುರ್ದೈವಿಗಳು. ತಾಯಿ ರಮಾಬಾಯಿ ಮತ್ತು ಇನ್ನೋಬ್ಬ 7 ವರ್ಷದ ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಚಿಂದಿ ಆಯುವ ನೆಪದಲ್ಲಿ ಮನೆಗಳ್ಳತನ – ಬೀಗ ಒಡೆಯುವಾಗಲೇ ಸಿಕ್ಕಿಬಿದ್ದ ಕಳ್ಳಿಯರು
ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು ಮಕ್ಕಳ ಸಮೇತ ದಂಪತಿ ಕಾಲುವೆಗೆ ಹಾರಿದ್ದಾರೆ. ಈ ವೇಳೆ ತಾಯಿ ಮತ್ತು ಇನ್ನೊಬ್ಬ ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇವರು ಮೂಲತಃ ಬೀದರ್ (Bidar) ನಗರದ ಮೈಲೂರು ನಿವಾಸಿಗಳಾಗಿದ್ದಾರೆ.
ಮೃತದೇಹವನ್ನು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಈಶ್ವರ್ ಖಂಡ್ರೆ ಭೇಟಿ (Eshwara Khandre) ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಎಸ್‍ಪಿ ಪ್ರದೀಪ್ ಗುಂಟಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು | ರಸ್ತೆ ಗುಂಡಿಗೆ ಬಿದ್ದ ಮಹಿಳೆ – ಕ್ಯಾಂಟರ್ ಲಾರಿ ಹರಿದು ಸಾವು