– 17 ಶಂಕಿತರ ವರದಿ ಕಾಯ್ತಿರೋ ಜಿಲ್ಲಾಡಳಿತ
ಬೀದರ್: ಜಿಲ್ಲೆಯ 11 ಜನರಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಜಿಲ್ಲೆಯನ್ನ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ. ನಗರದ ರಸ್ತೆಗಳಲ್ಲಿ ಜನರ ಓಡಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಈ 11 ಜನರು ದೆಹಲಿಯ ನಿಜಾಮುದ್ದೀನ್ ಮರ್ಕಜ್‍ಗೆ ತೆರಳಿದ್ದು, ಇನ್ನು 17 ಮಂದಿಯ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
Advertisement
ದೆಹಲಿಯ ಜಮಾತ್ ಗೆ ಹೋಗಿ ಬಂದವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಎಲ್ಲರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇಂದು ಬೆಳಗಿನ ಜಾವ ಬಂದ ವರದಿಯಲ್ಲಿ ಒಟ್ಟು 11 ಜನರಲ್ಲಿ ಸೋಂಕು ಇರೋದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್ ತಿಳಿಸಿದ್ದಾರೆ.
Advertisement
Advertisement
ಈ 11 ಜನರ ಪೈಕಿ 9 ಜನರು ನಗರದ ಓಲ್ಡ್ ಸಿಟಿ ನಿವಾಸಿಗಳಾಗಿದ್ದು, ಒಬ್ಬರು ಬಸವಕಲ್ಯಾಣ, ಇನ್ನೊಬ್ಬರು ಚಿಟಗುಪ್ಪ ತಾಲೂಕಿನ ಮನ್ನಾಖೇಳ್ಳಿ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಈ ಸೋಂಕಿತರು ಸುತ್ತಾಡಿದ ಕಡೆ ಹಾಗೂ ಸಂಪರ್ಕಿಸಿರುವ ಜನರನ್ನು ಜಿಲ್ಲಾಡಳಿತ ಶೋಧಿಸುತ್ತದೆ. ಅಲ್ಲದೆ ನಗರದ ಓಲ್ಡ್ ಸಿಟಿ 3 ಕಿ. ಮೀ. ವ್ಯಾಪ್ತಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ.