ಬೀದರ್: ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪಾಸಾದ ಪೌರತ್ವ ವಿಧೇಯಕ ವಿರೋಧಿಸಿ ಇಂದು ಮುಸ್ಲಿಂ ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೀದರ್ ನಲ್ಲಿ ಮೌನ ಪ್ರತಿಭಟನೆ ಮಾಡಿದ್ದಾರೆ.
ಸಾವಿರಾರು ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಹಾಗೂ ಕೇಲ ಕೇಂದ್ರ ಸಂಘಟನೆ ಕಾರ್ಯಕರ್ತರು ಸೇರಿ ಬೃಹತ್ ರ್ಯಾಲಿ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾಗೆ ವಿಧೇಯಕ ವಾಪಸ್ ಪಡೆಯುವಂತೆ ಎಚ್ಚರಿಕೆ ನೀಡಿದರು. ನಗರದ ಚೌಬಾರ್ ವೃತದಿಂದ ಪ್ರಾರಂಭವಾದ ರ್ಯಾಲಿ ನಯಾಕಮಾನ್, ಅಂಬೇಡ್ಕರ್ ವೃತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಗೆ ಬಂದು ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವಗೆ ಮನವಿ ಸಲ್ಲಿಸಿದರು.
Advertisement
Advertisement
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪೌರತ್ವ ವಿಧೇಯಕದ ವಿರುದ್ಧ ಕಿಡಿಕಾರಿದ ಸಂಘಟನೆ ಮುಖಂಡರು ಈ ವಿಧೇಯಕ ಮುಸ್ಲಿಂರಗೆ ಅಷ್ಟೇ ಅಲ್ಲ.ಇದು ದೇಶದ ಎಲ್ಲಾ ಜನರಿಗೆ ಮಾರಕವಾಗಲಿದೆ. ಮೋದಿ ದೇಶದ ಯುವಕರಿಗೆ ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡಿ ಯುವಕರಿಗೆ ದಾರಿ ದೀಪವಾಗುತ್ತೇನೆ ಎಂದಿದ್ದರು. ಆದರೆ ಇಂದು ಲಕ್ಷಾಂತರ ಯುವಕರು ಬೀದಿಗೆ ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಘಟನೆಗಳ ಮುಖಂಡರು ತೀವ್ರ ವಾಗ್ದಾಳಿ ನಡೆಸಿದರು.