ಬೀದರ್: ಬೈಕ್‍ಗಳ ನಡುವೆ ಮುಖಾಮುಖಿ ಭೀಕರ ರಸ್ತೆ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಮುತ್ತಂಗಿ ರಸ್ತೆಯಲ್ಲಿ ನಡೆದಿದೆ.
40 ವರ್ಷದ ಸಂಜು ಹಾಗೂ 18 ವರ್ಷದ ಸಂತೋಷ ಸಾವನ್ನಪ್ಪಿದ ದುರ್ವೈವಿಗಳಾಗಿದ್ದಾರೆ. ಅಪಘಾತವಾದ ರಭಸಕ್ಕೆ ಸ್ಥಳದಲ್ಲೆ ಓರ್ವ ಸಾವನ್ನಪ್ಪಿದ್ದಾನೆ. ಮೊತ್ತೊಬ್ಬ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇನ್ನುಳಿದ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.