ಬೀದರ್: ಶ್ವಾನ ಎಷ್ಟೇ ಬೊಗಳಿದರೂ ಆನೆ ಶಾಂತವಾಗಿ ನಡೆದುಕೊಂಡು ಹೋಗುತ್ತದೆ ಎಂದು ಹೇಳುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಶ್ವಾನಕ್ಕೆ ಹೋಲಿಸಿದ ಘಟನೆ ಬೀದರ್‌ನಲ್ಲಿ ನಡೆದಿದೆ.
ವಿಧಾನ ಪರಿಷತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಖೂಬಾ ಬಾಯಿಗೆ ಲಗಾಮು ಇಲ್ಲಾ. ಖುಬಾ ದೊಡ್ಡ ಕಳ್ಳ. ಅವರು ಪರರನ್ನು ನಂಬದ ಸ್ಥಿತಿಯಲ್ಲಿದ್ದಾರೆ. ಖೂಬಾ ಅವರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ. ಜೊತೆಗೆ ನಾನು 5 ಲಕ್ಷ ರಿಬಾನ್ ಚೆಸ್ಮಾ ಹಾಕುತ್ತೇನೆ ಎಂದು ಖೂಬಾ ಹೇಳಿದ್ದಾರೆ. ನಾನು ಕನ್ನಡಕ ಖರೀದಿ ಮಾಡುವಾಗ ಅವರು ನನ್ನ ಜೊತೆಯಲ್ಲಿದ್ದರೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪೋಷಕರು 2 ಡೋಸ್ ಲಸಿಕೆ ಪಡೆಯದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ: ಅಶೋಕ್
ನೀವು 10 ಲಕ್ಷ ರೂಪಾಯಿ ಸೂಟು – ಬೂಟು ಹಾಕಿಕೊಂಡು ಓಡಾಡುತ್ತಿರಾ. ನಿಮಗೆ 10 ಲಕ್ಷ ರೂ. ಎಲ್ಲಿಂದ ಬಂತು ಎಂದು ಯಾರನ್ನು ಕೇಳಬೇಕು ಎಂದ ಅವರು, ಪರಿಷತ್ ಚುನಾವಣೆಯ ಸೋಲಿನ ಭೀತಿಯಿಂದ ಅವರು ಈ ರೀತಿ ಕೇಳ ಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಈಶ್ವರ್ ಖಂಡ್ರೆ ಖೂಬಾ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ