ಬೀದರ್: ಎಟಿಎಂ ದರೋಡೆ, ಸಿಬ್ಬಂದಿ ಸಾವು ಪ್ರಕರಣದ (Bidar Atm Robbery Case)ಬಗ್ಗೆ ಸರಿಯಾಗಿ ಮಾಹಿತಿ ಪಡೆಯದೇ ಗುಂಡೇಟಿಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿ ಸಚಿವ ರಹೀಂ ಖಾನ್ (Rahim Khan)ಎಡವಟ್ಟು ಮಾಡಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುವಾಗ ಗುಂಡೇಟಿಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸ್ಥಳೀಯರು ಒಂದು ಸಾವು ಎಂದ ಕೂಡಲೇ ಸರಿಪಡಿಸಿಕೊಂಡ ಸಚಿವರು ಒಬ್ಬರು ಮೃತಪಟ್ಟು ಒಬ್ಬರು ಗಂಭೀರ ಎಂದು ಹೇಳುವ ಮೂಲಕ ತೇಪೆ ಹಚ್ಚಿದ್ದಾರೆ.
Advertisement
Advertisement
ಮೊನ್ನೆಯಷ್ಟೇ ಸಚಿವ ರಹೀಂ ಖಾನ್ ವಿರುದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ವಾಗ್ದಾಳಿ ನಡೆಸಿ ಸ್ವಕ್ಷೇತ್ರದ ಬಗ್ಗೆ ಸಚಿವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಗೇಲಿ ಮಾಡಿದ್ದರು. ಈಗ ಸಚಿವರ ಎಡವಟ್ಟಿನ ಹೇಳಿಕ ಜಿಲ್ಲೆಯಲ್ಲಿ ವೈರಲ್ ಆಗಿದೆ.