ಹೈದರಾಬಾದ್ (ಬೀದರ್): ಬೀದರ್‌ನಲ್ಲಿ (Bidar) ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಎಟಿಎಂ ಹಣ ಕದ್ದೊಯ್ದಿದ್ದ ದುಷ್ಕರ್ಮಿಗಳು ಹೈದರಾಬಾದ್‌ನಲ್ಲಿ (Hyderabad) ಲಾಕ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಅರೆಸ್ಟ್ ಆಗಿರುವ ಇಬ್ಬರೂ ಹೈದರಾಬಾದ್‌ನಲ್ಲಿ ದರೋಡೆ ಮಾಡಿದವರೇನಾ ಅಥವಾ ಬೇರೆ ಪ್ರಕರಣದಲ್ಲಿ ಸಿಲುಕಿದ ಆರೋಪಿಗಳಾ ಅನ್ನೋದನ್ನ ಪೊಲೀಸರು ಖಚಿತಪಡಿಸಬೇಕಿದೆ.
ಎಟಿಎಂ ಹಣ ಕದ್ದ ದರೋಡೆಕೋರರು ಹೈದರಾಬಾದ್‌ನತ್ತ ಎಸ್ಕೇಪ್ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆನ್ನುಹತ್ತಿದ್ದ ಬೀದರ್ ಪೊಲೀಸರು ದರೋಡೆಕೋರರನ್ನ ಪತ್ತೆಮಾಡಿದ್ದರು. ಇನ್ನೇನು ಬಂಧಿಸಬೇಕು ಅನ್ನುವಾಗಲೇ ಗುಂಡು ಹಾರಿಸಿ ಎಸ್ಕೇಪ್ ಆದರು. ಆದ್ರೆ ಬಲ್ಲ ಮೂಲಗಳು ದರೋಡೆಕೋರರನ್ನ ಬಂಧಿಸಿದ್ದಾರೆ ಎನ್ನುತ್ತಿವೆ. ಇಂದು (ಜ.16) ರಾತ್ರಿ 10 ಗಂಟೆ ಸುಮಾರಿಗೆ ಬಂಧಿಸಿರುವ ಪೊಲೀಸರು, ಶುಕ್ರವಾರ (ಜ.17) ಬೀದರ್‌ಗೆ ಕರೆತರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಪೊಲೀಸರು ಮಾತ್ರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಚಿತ್ರವಿಚಿತ್ರ ಸನ್ನಿವೇಶ – 9 ವರ್ಷದಿಂದ ಸಾಧು ತಲೆಯ ಮೇಲೆ ಕುಳಿತ ಪಾರಿವಾಳ!
Advertisement
Advertisement
ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದು ಹೇಗೆ?
ಬೀದರ್‌ನಲ್ಲಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದ ದರೋಡೆಕೋರರು ಹೈದರಾಬಾದ್‌ನ ರೋಷನ್ ಟ್ರಾವೆಲ್ಸ್‌ನಲ್ಲಿ ಬಸ್ ಬುಕ್ ಮಾಡಿದ್ದರು. ಹೈದರಾಬಾದ್‌ನಿಂದ ಛತ್ತಿಸ್‌ಘಡಕ್ಕೆ ಬಸ್ ಬುಕ್ ಮಾಡಿದ್ದರು. ಬಸ್ ಹತ್ತುವ ವೇಳೆ ಟ್ರಾವೆಲ್ಸ್ ಮ್ಯಾನೇಜರ್ ಅನುಮಾನಗೊಂಡು ಬ್ಯಾಗ್ ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ದರೋಡೆಕೋರು ನಾವು ಬಸ್‌ನಲ್ಲಿ ಹೋಗ್ಬೇಕು ಇದನ್ನು ತಗೊಳ್ಳಿ ಅಂತ ಒಂದು ಕಂತೆ ಹಣವನ್ನ ಟ್ರಾವೆಲ್ಸ್ ಮ್ಯಾನೇಜರ್‌ಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಟ್ರಾವೆಲ್ಸ್ ಮ್ಯಾಜೇನರ್ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ನನಗೆ ಹಣ ಬೇಡ, ಮೊದಲು ಕೆಳಗಿಳಿಯಿರಿ ಬ್ಯಾಗ್ ಚೆಕ್ ಮಾಡಬೇಕು ಅಂತ ಹೇಳಿದ್ದಾರೆ. ಬ್ಯಾಗ್ ಚೆಕ್ ಮಾಡಲು ಬಿಟ್ಟುಕೊಡದ ದರೋಡೆಕೋರರು ಟ್ರಾವೆಲ್ಸ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿದ್ದಾರೆ.
Advertisement
ಈ ವೇಳೆ ಬೀದರ್ ಪೊಲೀಸರೂ ಸಹ ಬಸ್‌ನಲ್ಲಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಖಾಸಗಿ ಬಸ್ ಕ್ಲೀನರ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಕೇಸ್ – 1 ಕೋಟಿಗೆ ಬೇಡಿಕೆಯಿಟ್ಟಿದ್ದ ಹಂತಕನ ಫೋಟೋ ಬಹಿರಂಗ
Advertisement