-ರಿಯಲ್ ಎಸ್ಟೇಟ್ ದಂಧೆಗಾಗಿ ರೈತ ವಿರೋಧಿ ಯೋಜನೆ ಎಂದು ಕಿಡಿ
ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ವಿರುದ್ಧ ಜೆಡಿಎಸ್ (JDS) ಹೋರಾಟ ಬೆನ್ನಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಟೌನ್‌ಶಿಪ್ ವಿಚಾರದಲ್ಲಿ ಬಿಜೆಪಿ ನಾಯಕರು ಡಿಕೆಶಿ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಬಿಡದಿ ಟೌನ್‌ಶಿಪ್‌ಗೆ ಪ್ರಾಥಮಿಕ ನೋಟಿಫಿಕೇಷನ್ ಹೊರಡಿಸಿದ್ದೇ ಡಿಕೆಶಿ. ಈಗ ಗೊಂದಲ ಮೂಡಿಸುವ ಹೇಳಿಕೆ ಕೊಡ್ತಿರೋದು ಸರಿಯಲ್ಲ. ಡಿಕೆಶಿಯವರು ಇದರಲ್ಲಿ ಎಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ಆದ್ರೆ ಬೇಡಿಕೆ ಆಧರಿಸಿ ಮುಂದುವರೆಯಿರಿ, ಯಾವ ಕಂಪೆನಿಗಳು ಭೂಮಿ ಕೇಳಿದ್ದಾರೆ? ಎಷ್ಟು ಕೃಷಿ ಭೂಮಿ ಬೇಕು? ಪರಿಹಾರ ಎಷ್ಟು ಕೊಡುತ್ತೀರಿ? ಇದೆಲ್ಲದರ ಸ್ಪಷ್ಟತೆ ಕೊಡಿ ಮೊದಲು ಎಂದು ಡಿಕೆಶಿಗೆ ಕೌಂಟರ್ ಕೊಟ್ಟರು. ಇದನ್ನೂ ಓದಿ: ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ 3,000 ಕೋಟಿ ಪ್ರವಾಹ ಪರಿಹಾರ ನೀಡಬೇಕು – ಅಶೋಕ್ ಆಗ್ರಹ
ರೈತರು ಟೌನ್‌ಶಿಪ್ ಮಾಡಬೇಡಿ ಅಂತ ಹೇಳುತ್ತಿಲ್ಲ. ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮಾಡಬೇಕು. ಜವಾಬ್ದಾರಿಯಿಂದ ಎಷ್ಟು ಬೇಕೋ ಅಷ್ಟೇ ಭೂಸ್ವಾಧೀನ ಮಾಡಿ. ಸೂಕ್ತ ಪರಿಹಾರ ಕೊಡಿ. ಯಾರೋ ಕೆಲವರ ಅನುಕೂಲಕ್ಕಾಗಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಬೇಡ ಎಂದು ಕಿಡಿಕಾರಿದರು. ರಿಯಲ್ ಎಸ್ಟೇಟ್ ದಂಧೆ ಮಾಡೋದು, ಕೃಷಿ ಭೂಮಿ ಸ್ವಾಧೀನ ಮಾಡೋದು, ಇದೇನಾ ಸರ್ಕಾರ ನಡೆಸುವ ರೀತಿ? ವ್ಯಾಪಾರ, ಹಣ, ಲಾಭ, ಅವರ ಅನುಕೂಲಕ್ಕೆ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದಸರಾ ಆನೆ ಬಳಿ ರೀಲ್ಸ್ ನಿಷೇಧ, ಕಮಾಂಡೋ ಕಾವಲು: ಈಶ್ವರ್ ಖಂಡ್ರೆ
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, 2009ರಲ್ಲಿ ಬಿಜೆಪಿ ಅವಧಿಯಲ್ಲಿ ಬಿಡದಿ ಟೌನ್‌ಶಿಪ್ ಪ್ರಾಜೆಕ್ಟ್ ಕೈಬಿಟ್ಟಿದ್ದೆವು. ರೈತರಿಗೆ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಯೋಜನೆ ಕೈಬಿಟ್ಟಿದ್ದೆವು. ನಮ್ಮ ಅವಧಿಯಲ್ಲಿ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಆಗಿರಲಿಲ್ಲ, ಡಿಕೆಶಿ ಆರೋಪ ಸುಳ್ಳು. ಬಿಡದಿ ಟೌನ್‌ಶಿಪ್ ಸತ್ತು ಹೋಗಿದ್ದ ಪ್ರಾಜೆಕ್ಟ್. ಈಗ ಡಿಕೆಶಿ ಅವರು ರಿಯಲ್ ಎಸ್ಟೇಟ್ ದಂಧೆಗಾಗಿ ಯೋಜನೆಗೆ ಜೀವ ಕೊಟ್ಟಿದ್ದಾರೆ. ಯಾರಿಗೋಸ್ಕರ ಈ ಯೋಜನೆ, ಯಾರಿಗೆ ಸೈಟ್ ಹಂಚ್ತೀರ? ಡಿಕೆಶಿ ಹೇಳಲಿ. 20 ವರ್ಷಗಳ ಹಿಂದೆಯೇ ಈ ಪ್ರಾಜೆಕ್ಟ್ ಕೈಬಿಡಲಾಗಿತ್ತು. ನಾವು, ಜೆಡಿಎಸ್ ಇದ್ದಾಗ ಈ ಯೋಜನೆ ಮುಟ್ಟಿಲ್ಲ. ಈಗ ಡಿಕೆಶಿ ಯಾಕೆ ಈ ಯೋಜನೆಗೆ ಕೈಹಾಕಿದ್ದಾರೆ? ರಿಯಲ್ ಎಸ್ಟೇಟ್‌ಗಾಗಿ ಡಿಕೆಶಿ ಆಸಕ್ತಿ ತೋರುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ