ಬಿಡದಿ ಅಪ್ರಾಪ್ತ ಬಾಲಕಿ ಹತ್ಯೆ ಕೇಸ್‌ಗೆ ಟ್ವಿಸ್ಟ್ – ರೈಲು ಡಿಕ್ಕಿ ಹೊಡೆದು ಸಾವು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

Public TV
1 Min Read
Ramanagara Murder

ರಾಮನಗರ: ಬಿಡದಿಯಲ್ಲಿ(Bidadi) ಅಪ್ರಾಪ್ತ ಬಾಲಕಿ ಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ರೈಲು ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಿಡದಿಯ ಹೋಬಳಿಯ ಭದ್ರಾಪುರ(Bhadrapura) ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಖುಷಿಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಬಿಡದಿ ಪೊಲೀಸರು(Bidadi Police) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದನ್ನೂ ಓದಿ: 18ನೇ ಆವೃತ್ತಿ, ಮೇ 18ರಂದೇ ಪ್ಲೇ-ಆಫ್‌ಗೆ ಎಂಟ್ರಿ – 18ರ ನಂಟು ಮುಂದುವರಿಸಿದ ಆರ್‌ಸಿಬಿ

ಪೊಲೀಸರು ಬಾಲಕಿಯ 32 ಬಗೆಯ ಸ್ಯಾಂಪಲ್ಸ್‌ಗಳನ್ನು ಎಫ್‌ಎಸ್‌ಎಲ್‌ಗೆ(Forensic Science Laboratory) ಕಳುಹಿಸಿದ್ದರು. ಬಳಿಕ ಎಫ್‌ಎಸ್‌ಎಲ್ ವರದಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ದೃಢವಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಮಳೆ ಕಾಟ – KSRTC ಮೇಲೆ ಉರುಳಿಬಿದ್ದ ಮರ

ಇದೀಗ ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹೆಡ್ ಇಂಜುರಿಯಿಂದ ಬಾಲಕಿ ಸಾವನ್ನಪ್ಪಿರುವುದು ದೃಢವಾಗಿದೆ. ರೈಲು ಡಿಕ್ಕಿಯಾದ ಪರಿಣಾಮ ಬಾಲಕಿ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾಳೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅಲ್ಲದೇ ರೈಲು ಡಿಕ್ಕಿಯಾಗಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share This Article