ಬೆಂಗಳೂರು: ಬೈಸಿಕಲ್ ಕೊಂಡೊಯ್ಯಲು ಮೆಟ್ರೋ ಟ್ರೈನ್‍ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
Advertisement
ಮೆಟ್ರೋ ಟ್ರೈನ್‍ನಲ್ಲಿ ಮಡಚಬಹುದಾದ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡಲಾಗುವುದು. ಈ ಬೈಸಿಕಲ್ 15 ಕೆಜಿ ತೂಕವನ್ನು ಮೀರದಂತೆ ಇರಬೇಕು. ಅಲ್ಲದೇ ಬೈಸಿಕಲ್ ಕೊಂಡೊಯ್ಯಲು ಲಗೇಜ್ ಶುಲ್ಕ ವಿನಾಯಿತಿ ಇದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ
Advertisement
Advertisement
ಹಸಿರು ಉಪಕ್ರಮವನ್ನು ಉತ್ತೇಜಿಸಲು, ಮಡಿಸಬಹುದಾದ ಬೈಸಿಕಲ್‌ನ ಗಾತ್ರವು 60CM X 45CM X 25CM ಮತ್ತು 15 ಕೆಜಿ ತೂಕವನ್ನು ಮೀರಬಾರದು. ಮಟ್ರೋ ನಿಲ್ದಾಣ ಪ್ರವೇಶದ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾವರ್ ಮೂಲಕ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಮೆಟ್ರೋ ಬೋಗಿಗಳ ಒಳಭಾಗದಲ್ಲಿ ಹಾನಿಯಾಗದಂತೆ ಬೈಸಿಕಲ್ ಅನ್ನು ಸರಿಯಾಗಿ ಪ್ಯಾಕ್ ಮಾಡಿರಬೇಕು. ಅಲ್ಲದೆ, ಇದು ಪಕ್ಕದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗದಂತೆ ಕೊಂಡೊಯ್ಯಬೇಕು.
Advertisement