ನವದೆಹಲಿ: ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ (Swati Maliwal) ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್ ಕುಮಾರ್ (Bibhav Kumar) ಪ್ರತಿದೂರು ದಾಖಲಿಸಿದ್ದಾರೆ.
ಸ್ವಾತಿ ಮಲಿವಾಲ್ ವಿರುದ್ಧವೇ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ನವದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತನಾಗಿರುವ ಬಿಭವ್ ಕುಮಾರ್ ಪ್ರತಿ ದೂರು ನೀಡಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದ್ರೂ ರಾಜಕೀಯ ಹಿಟ್‌ಮ್ಯಾನ್ ಪಾರಾಗಬಹುದು ಅಂದ್ಕೊಂಡಿದ್ದಾನೆ: ಸ್ವಾತಿ ಮಲಿವಾಲ್ ಕಿಡಿ
ಸ್ವಾತಿ ಮಲಿವಾಲ್ ಬಲವಂತವಾಗಿ ದೂರು ದಾಖಲಿಸಿದ್ದಾರೆ. ಸಿಎಂ ನಿವಾಸಕ್ಕೆ ಅಕ್ರಮವಾಗಿ ಅತಿಕ್ರಮಣ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಆಪ್ತ ಬಿಭವ್ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್ ದೂರು ನೀಡಿದ್ದು ಎಫ್‌ಐಆರ್ (FIR) ದಾಖಲಾಗಿದೆ. ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಪ್ತ ಬಿಭವ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಿತ್ತು. ಆಯೋಗದ ಎದುರು ವಿಚಾರಣೆಗೆ ಆರೋಪಿ ಹಾಜರಾಗಿಲ್ಲ. ಇದನ್ನೂ ಓದಿ: ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದು, ಕೆನ್ನೆಗೆ ಹೊಡೆದಿದ್ದಾನೆ – ಕೇಜ್ರಿವಾಲ್ ಆಪ್ತನ ವಿರುದ್ಧ ಮಲಿವಾಲ್ ದೂರು
ಸಿಎಂ ನಿವಾಸಕ್ಕೆ ತೆರಳಿದ್ದಾಗ, ಅವರ ಕಾರ್ಯದರ್ಶಿಯಾಗಿರುವ ಬಿಭವ್ ನನ್ನ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದರು ಎಂದು ಸಂಸದೆ ಸ್ವಾತಿ ಮಲಿವಾಲ್ ಆರೋಪಿಸಿದ್ದರು. ಸಿಎಂ ಕಚೇರಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಬಿಭವ್ ಕುಮಾರ್ ವಿರುದ್ಧ ಕೇಳಿಬಂದ ಆರೋಪವು ಈಗ ವಿವಾದಕ್ಕೆ ತಿರುಗಿದೆ. ಪ್ರತಿಪಕ್ಷಗಳ ತೀವ್ರ ಟೀಕೆಗೂ ಗುರಿಯಾಗಿದೆ.