ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಬೌಲಿಂಗ್ ಸಮಸ್ಯೆ ಕಾಡುತ್ತಿದ್ದು, ಭುವನೇಶ್ವರ್ ಗಾಯದ ಸಮಸ್ಯೆಯಿಂದ ಚೇತರಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಯುವ ಬೌಲರ್ ನವದೀಪ್ ಸೈನಿ ತಂಡವನ್ನು ಕೂಡಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ, ನವದೀಪ್ ಸೈನಿ ಮ್ಯಾಂಚೆಸ್ಟರ್ ಗೆ ಆಗಮಿಸಿದ್ದು, ನೆಟ್ ಬೌಲರ್ ಆಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಟೀಂ ಇಂಡಿಯಾದೊಂದಿಗೆ ಅವರು ತರಬೇತಿ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
Advertisement
Advertisement
ಏ.15 ರಂದು ಬಿಸಿಸಿಐ ಬಿಡುಗಡೆ ಮಾಡಿದ್ದ ಸ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಬೇಕಿರುವ ಶೈನಿ ರಣಜಿ ಟ್ರೋಫಿಯಲ್ಲಿ ಡೆಲ್ಲಿ ತಂಡದ ಪರ ಆಡ ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಅಲ್ಲದೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರವೂ ಉತ್ತಮ ಪ್ರದರ್ಶನ ನೀಡಿದ್ದರು.
Advertisement
ಭುವನೇಶ್ವರ್ ಗಾಯದ ಸಮಸ್ಯೆಯಿಂದ ಅವರಿಗೆ 8 ದಿನಗಳ ವಿಶ್ರಾಂತಿ ನೀಡಿ, ಬಹು ವೇಗ ಚೇತರಿಸಿಕೊಳ್ಳುವಂತೆ ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿಸಲಾಗಿದೆ. ಇತ್ತ ಟೀಂ ಇಂಡಿಯಾ ತಂಡದೊಂದಿಗೆ ಖಲೀಲ್ ಅಹಮದ್ ಟೀಂ ಇಂಡಿಯಾ ಎ ತಂಡದ ಪರ ಆಡಲು ತವರಿಗೆ ಹಿಂದಿರುಗಿದ್ದಾರೆ. ಸದ್ಯ ಮಾಹಿತಿ ಅನ್ವಯ ಒಂದು ವಾರದಲ್ಲಿ ಭುವನೇಶ್ವರ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಿದ್ದಾರೆ ಎನ್ನಲಾಗಿದೆ.
Advertisement
ರಿಷಬ್ ಪಂತ್ ಹಾಗೂ ನವದೀಪ್ ಸಿಂಗ್ ಸೈನಿ ಇಬ್ಬರು ಬೆಂಗಳೂರು ಎನ್‍ಸಿಎ ನಲ್ಲಿ ತರಬೇತಿ ಪಡೆಯುತ್ತಿದ್ದರು. ಧವನ್ ಗಾಯದ ಸಮಸ್ಯೆ ಬಳಿಕ ಪಂತ್ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದರು. ಭುವನೇಶ್ವರ್ ಗಾಯದ ಸಮಸ್ಯೆಗೆ ಒಳಗಾದ ಬಳಿಕ ಸದ್ಯ ಸೈನಿ ತಂಡವನ್ನು ಸೇರಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 27 ರಂದು ಆಡಲಿದೆ.