ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಟೂರ್ನಿ ಸೋಲಿನ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಆಗಸ್ಟ್ 1 ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ 18 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು, ಇದರಲ್ಲಿ ಭುವನೇಶ್ವರ್ ಸಹ ಸ್ಥಾನ ಪಡೆದಿದ್ದರು. ಆದರೆ ಸದ್ಯ ಭುವನೇಶ್ವರ್ ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಕೊಳ್ಳದ ಕಾರಣ ಆರಂಭದ 3 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
Advertisement
Mohammed Shami returns, Pant and Kuldeep feature, while Bhuvneshwar Kumar may miss out to a back injury as India name their squad for the first three matches of the #ENGvIND Test series.
SQUAD ➡️ https://t.co/n2F4oZpw9c pic.twitter.com/CklHs8ynBU
— ICC (@ICC) July 18, 2018
Advertisement
ಇಂಗ್ಲೆಂಡ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದ ವೇಳೆ ಭುವಿ ಬೆನ್ನು ನೋವು ಸಮಸ್ಯೆ ಒಳಗಾಗಿದ್ದರು. ಸದ್ಯ ಭುವಿ ಅವರ ಆರೋಗ್ಯ ಕುರಿತು ಬಿಸಿಸಿಐ ವೈದ್ಯರ ತಂಡ ನಿರ್ಣಯಕೈಗೊಳ್ಳಲಿದೆ. ಇನ್ನು ಪ್ರಾರಂಭದ ಪಂದ್ಯಗಳಿಗೆ ಭುವಿ ಅಲಭ್ಯರಾಗುವ ಕಾರಣ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಅಂತಿಮ 2 ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
Advertisement
ಭುವನೇಶ್ವರ್ ಅವರ ಸ್ಥಾನದಲ್ಲಿ ರಿಷಭ್ ಪಂತ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬುಮ್ರಾ ಸಹ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಸದ್ಯ ಕುಲ್‍ದೀಪ್ ನಾಯರ್, ಕರುಣ್ ನಾಯರ್, ದಿನೇಶ್ ಕಾರ್ತಿಕರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Advertisement
ಬಹು ನಿರೀಕ್ಷಿತ ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯ ಸರಣಿಗೆ ಆರಂಭದಿಂದಲೂ ಟೀಂ ಇಂಡಿಯಾ ಆಟಗಾರ ಗಾಯದ ಸಮಸ್ಯೆ ಎದುರಿಸುತ್ತಿದೆ.
TEAM NEWS: #TeamIndia for the first three Tests against England announced #ENGvIND. Bhuvneshwar Kumar aggravated a lower back condition in the 3rd ODI. His condition is being assessed & a call on his inclusion in the Test squad will be made soon. pic.twitter.com/lhlF65VRUP
— BCCI (@BCCI) July 18, 2018