ಡಬ್ಲಿನ್: ಆರಂಭಿಕ ಆಟಗಾರ ದೀಪಕ್ ಹೂಡಾರ ಚೊಚ್ಚಲ ಶತಕದೊಂದಿಗೆ ಟೀಂ ಇಂಡಿಯಾವು ಐರ್ಲೆಂಡ್ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿದೆ.
2 ಪಂದ್ಯಗಳ ಸರಣಿಯನ್ನು ಹಾರ್ದಿಕ್ ಪಾಂಡ್ಯ ಬಳಗ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಗೆಲುವಿನ ಮೂಲಕ ಸರಣಿಯನ್ನು ಕೈವಶಪಡಿಸಿಕೊಂಡ ಟೀಂ ಇಂಡಿಯಾ ಐರ್ಲೆಂಡ್ ತಂಡಕ್ಕೆ ತವರು ನೆಲದಲ್ಲಿಯೇ ವೈಟ್ ವಾಶ್ ಬಳಿದಿದೆ. ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ
Advertisement
Advertisement
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ಗೆ 225 ರನ್ ಕಲೆ ಹಾಕಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಐರ್ಲೆಂಡ್ ದಿಟ್ಟಪ್ರದರ್ಶನ ನೀಡಿದ ಹೊರತಾಗಿಯೂ 5 ವಿಕೆಟ್‌ಗೆ 221 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?
Advertisement
ಐರ್ಲೆಂಡ್ ಸ್ಫೋಟಕ ಆಟ: ಬೃಹತ್ ಮೊತ್ತದ ಗುರಿ ನೀಡಲಾಗಿ ಐರ್ಲೆಂಡ್ ಆಟಗಾರರು ಮೊದಲ ಓವರ್‌ನಿಂದರೆ ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದರು. ಸ್ಟಿರ್ಲಿಂಗ್-ನಾಯಕ ಬಾಲ್ಬಿರ್ನೀ ಜೋಡಿ ಮೊದಲ ವಿಕೆಟ್‌ಗೆ 5.4 ಓವರಲ್ಲಿ 72 ರನ್ ಜೊತೆಯಾಟವಾಡಿತು. ಸ್ಟಿರ್ಲಿಂಗ್ 18 ಎಸೆತಗಳಲ್ಲಿ 40 ರನ್ ಚಚ್ಚಿದರೆ, ಬಾಲ್ಬಿರ್ನಿ 37 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಒಳಗೊಂಡ 60 ರನ್ ಸಿಡಿಸಿದರು. ಕೊನೆ 4 ಓವರಲ್ಲಿ 52 ರನ್ ಬೇಕಿದ್ದಾಗ ಡೊಕ್ರೆಲ್(16 ಎಸೆತಗಳಲ್ಲಿ 34) ಮತ್ತು ಅಡೈರ್(23) ಅಬ್ಬರಿಸಿದರೂ ಗೆಲುವು ತಂದುಕೊಡಲು ಆಗಲಿಲ್ಲ. 221 ರನ್‌ಗಳ ವರೆಗೆ ಹೋರಾಡಿ ಭಾರತಕ್ಕೆ ಮಂಡಿಯೂರಿತು.
Advertisement
ಹೂಡಾ ಚೊಚ್ಚಲ ಶತಕ: ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಐರ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿತು. 2ನೇ ವಿಕೆಟ್‌ಗೆ ಜೊತೆಯಾದ ಹೂಡಾ ಮತ್ತು ಸ್ಯಾಮ್ಸನ್ ಬರೋಬ್ಬರಿ 176 ರನ್ ಜೊತೆಯಾಟವಾಡಿದರು. ಇದು ಟಿ20ಯಲ್ಲಿ ಯಾವುದೇ ವಿಕೆಟ್‌ಗೆ ಭಾರತೀಯ ಬ್ಯಾಟರ್‌ಗಳ ಗರಿಷ್ಠ ಜೊತೆಯಾಟ. ಹೂಡಾ 57 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಒಳಗೊಂಡ 104 ರನ್ ಬಾರಿಸಿದರು. ಈ ಮೂಲಕ ಭಾರತೀಯರ ಪೈಕಿ ಟಿ20ಯಲ್ಲಿ ಶತಕ ಬಾರಿಸಿದ 4ನೇ ಬ್ಯಾಟರ್ ಎನಿಸಿಕೊಂಡರು. ಇನ್ನು, ಸ್ಯಾಮ್ಸನ್ 42 ಎಸೆತಗಳಲ್ಲಿ 77 ರನ್ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು. ಸೂರ್ಯಕುಮಾರ್ 15, ಹಾರ್ದಿಕ್ 13 ರನ್ ಗಳಿಸಿದರೆ, ಮೂವರು ಶೂನ್ಯ ಸುತ್ತಿದರು.
ಭುವನೇಶ್ವರ್, ಉಮ್ರಾನ್, ಹರ್ಷಲ್, ಬಿಷ್ಣೋಯಿ ತಲಾ 1 ವಿಕೆಟ್ ಪಡೆದು ಭಾರತವನ್ನು ಗೆಲುವಿನ ದಡಕ್ಕೆ ಸೇರಿಸಿದರು.