ಭುವನೇಶ್ವರ: ಗರ್ಭಿಣಿಯನ್ನ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಡೀಸೆಲ್ ಖಾಲಿಯಾಗಿ ಮಾರ್ಗಮಧ್ಯದಲ್ಲಿಯೇ ವಾಹನ ನಿಂತುಕೊಂಡಿದೆ. ಪರಿಣಾಮ ಆಸ್ಪತ್ರೆಗೆ ತೆರಳುವ ಮೊದಲೇ ಗರ್ಭಿಣಿ ನರಳಿ ಪ್ರಾಣಬಿಟ್ಟ ಘಟನೆ ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ತುಳಸಿ(23) ಅವರನ್ನು ಮೊದಲು ಬಂಗಿರಿಪೋಸಿಯ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಕುಟುಂಬಸ್ಥರಿಗೆ ಸಲಹೆ ನೀಡಿದ್ದರು. ಆದ್ದರಿಂದ ಕುಟುಂಬಸ್ಥರು ಗರ್ಭಿಣಿಯನ್ನು ಅಂಬುಲೆನ್ಸ್‌ನಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ವಾಹನದ ಡೀಸೆಲ್ ಖಾಲಿಯಾಗಿದ್ದು, ಒಂದು ಗಂಟೆಗೂ ಅಧಿಕ ಕಾಲ ನೋವಿನಿಂದ ನರಳಿದ ಗರ್ಭಿಣಿ ಅಂಬುಲೆನ್ಸ್‌ನಲ್ಲೇ ಸಾವನ್ನಪ್ಪಿದ್ದಾರೆ.
Advertisement
Advertisement
ಈ ವೇಳೆ ಅಂಬುಲೆನ್ಸ್‌ನಲ್ಲಿ ಆಶಾ ಕಾರ್ಯಕರ್ತೆ ಕೂಡ ಇದ್ದರು, ಆದರೆ ಅವರು ಅಸಹಾಯಕ ಸ್ಥಿತಿಯಲ್ಲಿದ್ದರು. ಆದ್ದರಿಂದ ಪತ್ನಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮೃತ ಗರ್ಭಿಣಿಯ ಪತಿ ಚಿತ್ತರಂಜನ್ ಮುಂಡಾ ತಿಳಿಸಿದ್ದಾರೆ
Advertisement
ಅಂಬುಲೆನ್ಸ್ ಡೀಸೆಲ್ ಖಾಲಿ ಆಗಿ ನಿಂತ ತಕ್ಷಣ ಬೇರೆ ವಾಹನದ ವ್ಯವಸ್ಥೆ ಮಾಡಿದ್ದರೆ ನನ್ನ ಪತ್ನಿ ಉಳಿಯುತ್ತಿದ್ದಳು. ಆದರೆ ಸುಮಾರು 2 ತಾಸುಗಳ ಬಳಿಕ ಬೇರೆ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆ ವೇಳೆಗೆ ನನ್ನ ಪತ್ನಿ ಕೊನೆಯುಸಿರು ಎಳೆದಿದ್ದಳು ಎಂದು ಪತಿ ಅಳಲನ್ನು ತೋಡಿಕೊಂಡರು.
Advertisement
Mayurbhanj: A pregnant woman died allegedly after the ambulance in which she was being taken to Baripada Hospital ran out of fuel, earlier today. Chief District Medical Officer says,'Incident has come to my notice. It is pathetic. I will inquire into the matter.' #Odisha pic.twitter.com/f17X9vXmQb
— ANI (@ANI) October 5, 2019
ಅಂಬುಲೆನ್ಸ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ಇತ್ತು. ಆದರೆ ಟ್ಯಾಂಕ್ ಲೀಕ್ ಆಗಿದಕ್ಕೆ ಎಲ್ಲಾ ಡೀಸೆಲ್ ಸೋರಿ ವಾಹನ ಮಾರ್ಗ ಮಧ್ಯೆ ನಿಂತುಕೊಂಡಿತು ಎಂದು ಅಂಬುಲೆನ್ಸ್ ಚಾಲಕ ಹೇಳಿದ್ದಾನೆ. ಸದ್ಯ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಂಬುಲೆನ್ಸ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.