ರಾಂಧವ ಸಿನಿಮಾ ಮೂಲಕ ಉದ್ಯಮದಲ್ಲಿ ದೊಡ್ಡದಾಗಿ ನಿಲ್ಲೋ ಭರವಸೆ ಹುಟ್ಟಿಸಿದ್ದ ನಟ ಭುವನ್ ಪೊನ್ನಣ್ಣ (Bhuvan Ponnanna) ಈ ಸಲ ಗೆದ್ದೇ ಗೆಲ್ಲೋ ಭರವಸೆಯೊಂದಿಗೆ, ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ (Yogaraj Bhat) ರೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಹಲೋ 123 (Hello 123) ಅನ್ನೋ ವಿಶೇಷ ಕಥೆಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಭುವನ್. ಯೋಗರಾಜ್ ಭಟ್ ಸಾಥ್ ಕೊಟ್ಟಿದ್ದಾರೆ. ಹೀಗಾಗಿ ಹೊಸ ಭುವನ್ ಕಾಣಿಸ್ಕೊಳ್ಳೋದ್ರಲ್ಲಿ ಅನುಮಾನವಿಲ್ಲ. ಹರಿಕೃಷ್ಣ ಈ ಮ್ಯೂಸಿಕ್ ಜೊತೆ ವಿನೂತನ ಕಥೆಯೊಂದನ್ನ ಭುವನ್ ಮೂಲಕ ಹೇಳಲು ಯೋಗರಾಜ್ ಭಟ್ ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ `ಹಲೋ 123′ ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರದ ಅಧಿಕೃತ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣಗೊಂಡಿದ್ದು ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಪುತ್ರಿ ತ್ರಿದೇವಿಯ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ: ಸೈಮಾ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನ: ದುನಿಯಾ ವಿಜಯ್ ಕೆಂಡಾಮಂಡಲ
ತಮ್ಮ ನಿವಾಸದ ದೇವರ ಮನೆಯಲ್ಲಿ ಚಿತ್ರದ ನಿರ್ಮಾಪಕ ವಿಜಯ್ ತಾತಾ ಚಿತ್ರತಂಡಕ್ಕೆ ಅಡ್ವಾನ್ಸ್ ಹಣ ನೀಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಲಿದ್ದು ಎಲ್ಲಾ ಅಂದುಕೊಂಡಂತೆ ಆದ್ರೆ `ಹಲೋ 123′ ಮುಂದಿನ ವರ್ಷ ಮಾರ್ಚ್ ವೇಳೆಗೆ ರಿಲೀಸ್ ಆಗಲಿದೆ. ಇದನ್ನೂ ಓದಿ: ಶ್ರೀಧರ್ ಸಂಭ್ರಮ್ ಸಂಗೀತದ `ಲೈಫ್ ಟು ಡೇ’ ಹಾಡಿಗೆ ಜೋಗಿ ಪ್ರೇಮ್ ಕಂಠದಾನ