ಗಾಂಧಿನಗರ: ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಸ್ಥಾನಗಳನ್ನು ಪಡೆಯುವ ಮೂಲಕ ಗುಜರಾತ್‍ನಲ್ಲಿ (Gujarat) ಬಹುಮತ ಪಡೆದಿರುವ ಬಿಜೆಪಿ (BJP) ಇಂದು ಏಳನೇ ಬಾರಿಗೆ ಸರ್ಕಾರ ರಚಿಸಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ಭೂಪೇಂದ್ರ ಪಟೇಲ್ (Bhupendra Patel) ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
Advertisement
ಈ ಮೂಲಕ ಗುಜರಾತ್‍ನ 18ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾದರು. ಈ ಹಿಂದೆ ಕಳೆದ ವರ್ಷ ವಿಜಯ್ ರೂಪಾನಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಭೂಪೇಂದ್ರ ಪಟೇಲ್ ಸಿಎಂ ಆಗಿದ್ದರು. ಇದೀಗ ಸತತ ಎರಡನೇ ಬಾರಿ ಅಧಿಕಾರ ಹಿಡಿದಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಪ್ರಮಾಣವಚನ ಬೋಧಿಸಿದರು. ಸಿಎಂ ಜೊತೆ ಇಂದು ಒಟ್ಟು 16 ಮಂದಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿದರು. ಈ ಹಿಂದೆ ಭೂಪೇಂದ್ರ ಪಟೇಲ್ ಸಂಪುಟದಲ್ಲಿದ್ದ ಕಾನು ದೇಸಾಯಿ, ಋಷಿಕೇಶ್ ಪಟೇಲ್, ರಾಘವ್ಜಿ ಪಟೇಲ್, ಬಲವಂತಸಿನ್ಹ್ ರಜಪೂತ್, ಕುನ್ವರ್ಜಿ ಬವಲಿಯಾ, ಮುಲು ಬೇರಾ, ಕುಬೇರ್ ದಿಂಡೋರ್ ಮತ್ತು ಭಾನುಬೆನ್ ಬಬಾರಿಯಾ ಮತ್ತೊಮ್ಮೆ ಕ್ಯಾಬಿನೆಟ್‍ನಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಚಿವ ದೇಶ್‌ಮುಖ್ ಜಾಮೀನು ನೀಡಿ ಕೆಲ ಹೊತ್ತಲ್ಲೇ ತಡೆ ಹಿಡಿದ ಬಾಂಬೆ ಕೋರ್ಟ್
Advertisement
Advertisement
ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನ ಹೆಲಿಪ್ಯಾಡ್ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜೆ.ಪಿ ನಡ್ಡಾ, ಕೆಲ ಕೇಂದ್ರ ಸಚಿವರು ಭಾಗಿಯಾದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂಗಳು, ಮಾಜಿ ಸಿಎಂ ಯಡಿಯೂರಪ್ಪ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷವಾಗಿ 200 ಸಂತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ ಮಗಳು
Advertisement
ಗುಜರಾತ್ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ ಬಿಜೆಪಿ 156 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತ್ತ ಈ ಬಾರಿ ಚುನಾವಣೆಯಲ್ಲಿ ಶೇಕಡಾ 10 ರಷ್ಟು ಸ್ಥಾನಗಳನ್ನು ಗೆಲ್ಲದ ಕಾಂಗ್ರೆಸ್ ಅಧಿಕೃತ ವಿಪಕ್ಷ ಸ್ಥಾನವನ್ನು ಕಳೆದುಕೊಂಡಿದೆ. ಕೇವಲ 17 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಫಲವಾಗಿ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.