ವಾರಾಣಸಿ: ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‍ಸಿ) ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
Advertisement
ಪೊಲೀಸರು ಓರ್ವ ವಿದ್ಯಾರ್ಥಿನಿ ಮತ್ತು ಮೂವರು ವಿದ್ಯಾರ್ಥಿ ಸೇರಿದಂತೆ ನಾಲ್ವರಿಗೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ವಿದ್ಯಾರ್ಥಿಗಳ ಜಡೆಯನ್ನು ಹಿಡಿದು ಎಳೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ವಾರಾಣಸಿ ಜಿಲ್ಲಾಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
Advertisement
Advertisement
ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕುಲಪತಿಯರ ಮನೆಗೆ ಹೋಗಲು ಮುಂದಾಗಿದ್ದು, ಅವರನ್ನು ಭದ್ರತಾ ಪಡೆಗಳು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಆಕ್ರೋಶದಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
ಏನಿದು ಪ್ರಕರಣ?
ಗುರುವಾರ ಬಿಎಚ್‍ಸಿ ಕ್ಯಾಂಪಸ್ ಹೊರಗಡೆ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿಯನ್ನು ಮೂವರು ಯುವಕರು ಬೈಕ್‍ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ದೂರು ನೀಡಲು ಹೋಗಿದ್ದರು. ಆದರೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಬದಲು ವಿದ್ಯಾರ್ಥಿನಿ ಹಾಸ್ಟೆಲ್‍ಯಿಂದ ಹೋಗುವ ಬರುವ ಸಮಯವನ್ನು ಪ್ರಶ್ನಿಸಿ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಅಧಿಕಾರಿಗಳ ಈ ವರ್ತನೆಯಿಂದ ಕೋಪಗೊಂಡ ವಿದ್ಯಾರ್ಥಿಗಳು ಶುಕ್ರವಾರ ಕ್ಯಾಂಪಸ್‍ನ ಒಳಗಡೆ ಯಾರನ್ನು ಹೋಗಲು ಬಿಡದೆ ಮುಖ್ಯ ಗೇಟ್‍ಅನ್ನು ಮುಚ್ಚಿ ಹೊರಗಡೆ ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಪ್ರಧಾನಿ ಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನದ ಬಗ್ಗೆ ಭಾಷಣಗಳನ್ನು ಮಾಡುತ್ತಾರೆ. ಆದರೆ ಬಿಎಚ್‍ಸಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ವಾಸ್ತವವಾಗಿ ನೋಡಬೇಕು ಎಂದು ಕೂಗಿ ಕೂಗಿ ಹೇಳುತ್ತಿದ್ದಾರೆ.
BJP version of Beti Bachao, Beti Padhao in BHU https://t.co/2XWIG5CG2q
— Rahul Gandhi (@RahulGandhi) September 24, 2017
Video: BHU girls speak about violent police action on their peaceful protest pic.twitter.com/ByVpVJnoRA
— India Resists (@India_Resists) September 24, 2017
Police enters BHU campus lathicharges protesting girls who demanded security.
Shame on this govt
Beti bachao? ??? pic.twitter.com/GIl70I9CbO
— Shabnam Hashmi (@ShabnamHashmi) September 23, 2017
#BHU protest: Police thrashed us, dragged us by hair, claim girl students https://t.co/s0jFcBQZ92#BHUProtest pic.twitter.com/0ptC2rgY2z
— Business Standard (@bsindia) September 24, 2017
BHU violence: Girls demand better security on the University's campus but are met with lathicharge pic.twitter.com/PJOFnMbe36
— TIMES NOW (@TimesNow) September 24, 2017
#BHU sources claim this lathi charge video was shot last night. pic.twitter.com/d4fkftgROa
— Vikas Pathak (@vikaspathak76) September 24, 2017
Violence rocks BHU campus as students, police clash https://t.co/6IneFupEvG via @TOICitiesNews pic.twitter.com/FJoonQyafy
— The Times Of India (@timesofindia) September 24, 2017
Violence in BHU campus, students clash with cops. Watch this full report #ITVideo
More videos https://t.co/NounxnP7mg pic.twitter.com/6NVEgAmLOX
— IndiaToday (@IndiaToday) September 24, 2017