ಬೆಂಗಳೂರು: ಭೋವಿ ನಿಗಮ ಹಗರಣ ಪ್ರಕರಣದಲ್ಲಿ ಇಡಿ ಅಧಿಕಾರಿಗಳು (Enforcement Directorate) ನಿಗಮದ ಜನರಲ್ ಮ್ಯಾನೇಜರ್ ನಾಗರಾಜಪ್ಪ ಅವರನ್ನು ಬಂಧಿಸಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಕೇಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭೋವಿ ನಿಗಮದಲ್ಲಿ (Bhovi Corporation Scam) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಶರಣಾದ ಜೀವಾ ಅವರ ಪಾತ್ರ ಇತ್ತಾ ಎಂಬ ಅನುಮಾನ ಇದೆ. ಇದರ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಜೀವಾ ಅವರ ಅನ್ನಿಕಾ ಎಂಟರ್ ಪ್ರೈಸಸ್‌ಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ. ಇದನ್ನೂ ಓದಿ: ಭೋವಿ ನಿಗಮದಿಂದ 34 ಕೋಟಿ ಹಣ ಅಕ್ರಮ ವರ್ಗಾವಣೆ – ಯಾರ‍್ಯಾರಿಗೆ ಎಷ್ಟು ಹಣ?
ಅನ್ನಿಕಾ ಎಂಟರ್ ಪ್ರೈಸಸ್‌ಗೆ 7.16 ಕೋಟಿ ರೂ., ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ಗೆ ಒಟ್ಟು 10.9 ಕೋಟಿ ರೂ. ವರ್ಗವಾಗಿದೆ. ಇನ್ನುಳಿದ ಮೂರು ಕಂಪನಿಗಳಲ್ಲಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪರವರ ಆಪ್ತರ ಪಾಲುದಾರಿಕೆ ಇದೆ.
ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕಿ ಲೀಲಾವತಿ ಅವರ ಸೋದರಿ ಮಂಗಳ ರಾಮು ಅವರಿಗೆ ಹಂತ ಹಂತವಾಗಿ ಕಳ್ಳ ಹಾದಿಯಲ್ಲಿ 1.48 ಕೋಟಿ ರೂ. ಹಣ ವರ್ಗವಾಗಿದೆ. ಇಷ್ಟೆಲ್ಲಾ ಹಣ ವರ್ಗಾವಣೆ ಆಗಿರೋದು ತನಿಖೆ ವೇಳೆ ಬಯಲಾಗಿತ್ತು. ಇದನ್ನೂ ಓದಿ: ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ