ನವದೆಹಲಿ: ರಾಜ್ಯ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ನೀಡಿದೆ. ಅಖಿಲ ಭಾರತೀಯ ಭೋವಿ ಸಮಾಜ ಅಧ್ಯಕ್ಷ ಡಾ. ವೆಂಕಟೇಶ್ ಮೌರ್ಯ ನೇತೃತ್ವದಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಮನವಿ ಪತ್ರ ನೀಡಲಾಯಿತು.
ಮುಖ್ಯಮಂತ್ರಿ ಬಸವರಾಜ ಪರವಾಗಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮನವಿ ಸ್ವೀಕರಿಸಿದರು. ಕೂಡಲೇ ಈ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ಅಧ್ಯಕ್ಷರ ನೇಮಕ ಮಾಡುವ ಭರವಸೆ ನೀಡಿದ್ದಾರೆ. ಮನವಿ ನೀಡಿದ ಬಳಿಕ ಮಾತನಾಡಿದ ಭಾರತೀಯ ಭೋವಿ ಸಮಾಜ ಅಧ್ಯಕ್ಷ ಡಾ. ವೆಂಕಟೇಶ್ ಮೌರ್ಯ, ಕಳೆದ ನಾಲ್ಕು ವರ್ಷಗಳಿಂದ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಆಗಿಲ್ಲ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಡೆಯದಾಗಿ ಸೀತರಾಮ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಗಳು ಬಿಜೆಪಿ ಸರ್ಕಾರದ ಸೆಟ್ಲ್ಮೇಂಟ್ ಕೇಂದ್ರಗಳಾಗಿವೆ: ಈಶ್ವರ್ ಖಂಡ್ರೆ
Advertisement
Advertisement
ಬಳಿಕ ಕಾಂಗ್ರೆಸ್ ಜೆಡಿ ಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೂ ಅಧ್ಯಕ್ಷರ ನೇಮಕವಾಗಿಲ್ಲ ಇದರಿಂದಾಗಿ ನಿಗಮದಲ್ಲಿ ಅಧಿಕಾರಿಗಳೇ ಸುಪ್ರೀಂ ಆಗಿದ್ದು ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ. ಈ ಸಂಬಂಧ ಹಿಂದೆ ತನಿಖೆ ನಡೆಸಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಇದನ್ನೂ ಓದಿ: ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್
Advertisement
ಈಗ ಅಮಾನತು ಆದೇಶಕ್ಕೆ ಕೋರ್ಟ್ ಆದೇಶಕ್ಕೆ ತಡೆ ತಂದಿರುವ ಅಧಿಕಾರಿಗಳು ಮತ್ತದೇ ಸ್ಥಾನದಲ್ಲಿ ಮುಂದುವರಿದ್ದು ಮತ್ತಷ್ಟು ಅಕ್ರಮಕ್ಕೆ ಎಡೆಮಾಡಿಕೊಟ್ಟಾಗಿದೆ ಎಂದು ಆರೋಪಿಸಿದರು. ಈ ಹಿನ್ನಲೆ ನಿಯಮಕ್ಕೆ ಅಧ್ಯಕ್ಷರ ನೇಮಕ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸೂಕ್ತ ಫಲಾನುಭವಿಗಳಿಗೆ ತಲುಪಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.