ಭೋಪಾಲ್: ಕೋವಿಡ್-19 ವಾರಿಯರ್ ಆಗಿ ಕಾರ್ಯನಿರ್ವಹಿಸಿದ್ದ ಮತ್ತು ಕೊರೊನಾ ವೈರಸ್‍ನ ಎರಡನೇ ಅಲೆಯ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿದ್ದ ಭೋಪಾಲ್‍ನ ಆಟೋ ಚಾಲಕನೊಬ್ಬನನ್ನು ಅತ್ಯಾಚಾರ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ.
ಜಾವೇದ್ ಬಂಧಿತ ಆರೋಪಿ. ಬಾಡಿಗೆದಾರರೊಬ್ಬರು ಅವನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ವ್ಯಕ್ತಿಯು ಒಬ್ಬಂಟಿಯಾಗಿರುವಾಗಲೆಲ್ಲಾ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದನು. ಒಂದು ದಿನ ಮಹಿಳೆಯ ಪತಿ ಕೆಲಸಕ್ಕೆ ಹೋಗಿದ್ದಾಗ, ಅವನು ಆಕೆಯ ಕೋಣೆಗೆ ಹೋಗಿ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಉಗುರಿನಲ್ಲಿದ್ದ ರಕ್ತದ ಕಲೆಯಿಂದಾಗಿ ಕೊಲೆ ಮಾಡಿದ್ದ ವ್ಯಕ್ತಿ ಸಿಕ್ಕಿಬಿದ್ದ!
- Advertisement
- Advertisement
ಈ ವಿಷಯವನ್ನು ಮಹಿಳೆ ಒಮ್ಮೆ ತಮ್ಮ ಪತಿಗೆ ತಿಳಿಸಿದ್ದರು. ನಂತರ ಅವರ ಪತಿ ಅವನೊಂದಿಗೆ ಜಗಳವಾಡಿ, ಅವನನ್ನು ಮನೆಯಿಂದ ಹೊರಹಾಕಿದರು. ಆದರೂ ಜಾವೇದ್ ಮಹಿಳೆಯನ್ನು ಬೆನ್ನಟ್ಟಿ ಬೆದರಿಸುತ್ತಲೇ ಇದ್ದನು. ಕೊನೆಗೆ ಜಾವೇದ್ ಮಹಿಳೆಗೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದಾಗ ಅವರು ಐಶ್ ಬ್ಯಾಗ್ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಪೆÇಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಜಾವೇದ್‍ನನ್ನು ಬಂಧಿಸಿದ್ದಾರೆ. ಇಂದು ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುತುಬ್ ಮಿನಾರ್‌ಗೆ ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಲು ಆಗ್ರಹಿಸಿ ಪ್ರತಿಭಟನೆ
ದೇಶದಲ್ಲಿ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್‍ನ ತೀವ್ರ ಕೊರತೆ ಉಂಟಾದಾಗ ಜನರಿಗೆ ಆಮ್ಲಜನಕವನ್ನು ನೀಡುವ ಮೂಲಕ ಜಾವೇದ್ ಖ್ಯಾತಿಯನ್ನು ಗಳಿಸಿದ್ದನು.