ಭೋಪಾಲ್: ಒನ್ ವೇನಲ್ಲಿ ರಾಂಗ್ ಸೈಡ್‍ನಿಂದ ಬರೋದು ತಪ್ಪು ಅಂತ ಗೊತ್ತಿದ್ರೂ ಇಲ್ಲೊಬ್ಬ ಎಸ್‍ಯುವಿ ವಾಹನ ಚಾಲಕ, ವಿರುದ್ಧ ದಿಕ್ಕಿನಿಂದ ಬಂದಿದ್ದಲ್ಲದೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾನೆ. ಆದ್ರೆ ಬೈಕ್ ಸವಾರ ಧೈರ್ಯಗೆಡದೆ ಆ ವಾಹನ ಸವಾರನಿಗೆ ತಕ್ಕ ಪಾಠ ಕಲಿಸಿದ್ದಾನೆ.
ನವೆಂಬರ್ 3ರಂದು ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಈ ಘಟನೆ ನಡೆದಿದೆ. ವಿರುದ್ಧ ದಿಕ್ಕಿನಿಂದ ಬಂದ ಎಸ್‍ಯುವಿ ವಾಹನ ಮುಂದೆ ಹೋಗದಂತೆ ಬೈಕ್ ಸವಾರ ಅಡ್ಡಗಟ್ಟಿ ನಿಂತಿದ್ದರು. ಇದರಿಂದ ಕೋಪಗೊಂಡ ಎಸ್‍ಯುವಿ ವಾಹನ ಚಾಲಕ ಬೈಕ್ ಸವಾರನ ಮೇಲೆ ವಾಹನ ಹರಿಸುವುದಾಗಿ ಹೆದರಿಸಿದ್ದ. ವಾಹನವನ್ನ ಚಲಾಯಿಸಿ ಬೈಕ್‍ಗೆ ತೀರಾ ಸಮೀಪ ತಂದಿದ್ದ.
ಆದರೂ ಇದಕ್ಕೆಲ್ಲಾ ಹೆದರದ ಬೈಕ್ ಸವಾರ ಅಲ್ಲಿಂದ ಒಂದಿಷ್ಟೂ ಕದಲಲಿಲ್ಲ. ಎಷ್ಟು ಹೊತ್ತಾದ್ರೂ ಎಸ್‍ಯುವಿ ವಾಹನ ಚಾಲಕ ಕೂಡ ಅಲ್ಲಿಂದ ಹಿಂದಕ್ಕೆ ಹೋಗದ ಕಾರಣ ಬೈಕ್ ಸವಾರ ಆ ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದುಕೊಂಡು ಮುಂದೆ ಹೋಗಲು ಗಾಡಿ ಸ್ಟಾರ್ಟ್ ಮಾಡಿದ್ದರು.
ಆದ್ರೆ ಎಸ್‍ಯುವಿ ಚಾಲಕ ಕೂಡ ಬಂದು ಬೈಕ್ ನಂಬರ್ ಪ್ಲೇಟ್‍ನ ಫೋಟೋ ತೆಗೆದುಕೊಂಡಿದ್ದಾನೆ. ನಂತರ ಇದ್ದಕ್ಕಿದ್ದಂತೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾನೆ. ಬೈಕ್ ಸವಾರನನ್ನು ಬ್ಯಾರಿಕೇಡ್‍ಗಳ ಮೇಲೆ ನೂಕಾಡಿದ್ದು, ರಸ್ತೆಯಲ್ಲೇ ಜಗಳವಾಗಿದೆ. ಇದನ್ನು ನೋಡಿ ಕೆಲ ಸ್ಥಳೀಯರು ಇಬ್ಬರ ಮಧ್ಯೆ ಏನಾಯಿತೆಂದು ವಿಚಾರಿಸಲು ಯತ್ನಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಇಂದೋರ್ ನಿವಾಸಿಯಾದ ನಿಲಯ್ ವರ್ಮಾ ಎಂಬವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಈವರೆಗೆ ವಿಡಿಯೋ 1.4 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ.
ಬೈಕ್ ಸವಾರನ ಧೈರ್ಯವನ್ನು ನಿಲಯ್ ಕೊಂಡಾಡಿದ್ದು, ವಿಡಿಯೋ ನೋಡಿದವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಸ್‍ಯುವಿ ವಾಹನ ಚಾಲಕನ ವಿರುದ್ಧ ದಾಖಲಾದ ಎಫ್‍ಐಆರ್ ಪ್ರತಿಯನ್ನೂ ಕೂಡ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
https://www.facebook.com/nilayv/videos/pcb.10155887382929851/10155887380764851/?type=3&theater
https://www.facebook.com/nilayv/posts/10155887382929851