Karnataka
ವಾಟರ್ ಟ್ಯಾಂಕರೊಂದು ಬೈಕ್ ಸವಾರರ ಮೇಲೆ ಹರಿದ ವೀಡಿಯೋ ನೋಡಿ!

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನ ಷಹಜಹಾನಾಬಾದ್ ಎಂಬಲ್ಲಿ ಮಂಗಳವಾರ ಸಂಜೆ ನಡೆದ ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಡೆದಿದ್ದೇನು?: ಷಹಜಹಾನಾಬಾದ್ ನಲ್ಲಿ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ನೀರಿನ ಟ್ಯಾಂಕರ್ ಏಕಾಏಕಿ ಬೈಕ್ ಸವಾರರ ಮೇಲೆ ಹರಿದು ಆದರ್ಶ ಆಸ್ಪತ್ರೆ ಕಟ್ಟಡ ಒಳಗೆ ನುಗ್ಗಿದೆ. ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಘಟನೆಯ ಬಳಿಕ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ ಅಂತಾ ಘಟನೆಯ ಪ್ರತ್ಯಕ್ಷದರ್ಶಿಗಳಾದ ಫಯಾಜ್, ಐಶ್ಬಾಗ್ ಮತ್ತು ಅಮಾನುಲ್ಲಾಹ್ ತಿಳಿಸಿದ್ದಾರೆ ಅಂತಾ ಅಲ್ಲಿನ ಪೊಲೀಸರು ಹೇಳಿದ್ದಾರೆ.
ಬ್ರೆಕ್ ಫೈಲ್ ಆಗಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿತ್ತೋ ಅಥವಾ ಇನ್ನೇನಾದ್ರೂ ತಾಂತ್ರಿಕ ದೋಷಗಳಿಂದಾಗಿ ಈ ಅವಘಡ ಸಂಭವಿಸತ್ತೋ ಅನ್ನೋದರ ಬಗ್ಗೆ ತನಿಖೆಯ ಬಳಿಕವಷ್ಟೇ ಹೊರಬರಬೇಕಿದೆ. ಸದ್ಯ ಆರೋಪಿ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
https://www.youtube.com/watch?v=C5pgmxoQk3Q&feature=youtu.be
