ಟಾಲಿವುಡ್ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಭೋಲಾ ಶಂಕರ್ (Bhola Shankar) ಸಿನಿಮಾದ ಮೆಗಾ ಪ್ರಿ ರಿಲೀಸ್ ಇವೆಂಟ್ ಆಗಸ್ಟ್ 6 ರಂದು ನಡೆಯಲಿದೆ. ಮೆಗಾ ಇವೆಂಟ್ ಆಗಿ ಹೈದರಾಬಾದ್ (Hyderabad) ನ ಶಿಲ್ಪಕಲಾ ವೇದಿಕೆ ರೆಡಿಯಾಗುತ್ತಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಲಿದ್ದಾರೆ.
ನಾನಾ ಕಾರಣಗಳಿಂದಾಗಿ ಈ ಸಿನಿಮಾ ಸುದ್ದಿಯಾಗುತ್ತಲೇ ಇದೆ. ಸಿನಿಮಾದ ಟ್ರೈಲರ್ ಹೈಪ್ ಕ್ರಿಯೆಟ್ ಮಾಡ್ತಿದ್ರೆ, ಮತ್ತೊಂದು ಕಡೆ ಚಿರಂಜೀವಿ ಅವರ ಸಂಭಾವನೆ ವಿಚಾರ ನೆಟ್ಟಿರ ಚರ್ಚೆಗೆ ಗ್ರಾಸವಾಗಿದೆ. ಭೋಲಾ ಶಂಕರ್ ಮೆಗಾಸ್ಟಾರ್ ಸಂಭಾವನೆ ಪಡೆದಿರೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಾ.
ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ತಂಗಿ ಪಾತ್ರದಲ್ಲಿ ಕೀರ್ತಿ ಸುರೇಶ್ (Keerthi Suresh) ಜೀವತುಂಬಿದ್ದಾರೆ. ಸದ್ಯ ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ್ಯಕ್ಷನ್, ಎಮೋಷನ್, ಕಾಮಿಡಿ ದೃಶ್ಯಗಳನ್ನು ಎಡಿಟ್ ಮಾಡಿ ಟ್ರೇಲರ್‌ನಲ್ಲಿ ಹಾಕಲಾಗಿದೆ. ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿದ್ದಾರೆ. ಅವರು ಹೇಳುವ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಚಿರಂಜೀವಿ ಅವರ ಮಾಸ್ ಡೈಲಾಗ್ ಡೆಲಿವರಿ ಟ್ರೈಲರ್‌ನ ವಿಶೇಷ ಆಕರ್ಷಣೆಯಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.
ನನ್ನ ಹಿಂದೆ ಮಾಫಿಯಾ ಇದೆ ಎಂದು ರವಿಶಂಕರ್ ಹೇಳುತ್ತಾರೆ. ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ ಎಂದು ರವಿಶಂಕರ್‌ಗೆ ತಿರುಗೇಟು ನೀಡುವ ಚಿರು ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ & ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ದುಬಾರಿ ನಟ ಮೆಗಾಸ್ಟಾರ್ ಅವರು ‘ಭೋಲಾ ಶಂಕರ್’ (Bhola Shankar) ಸಿನಿಮಾಗಾಗಿ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೇ ನಟಿಸಿದ್ದಾರಂತೆ. ಈ ಸುದ್ದಿ ಗಾಸಿಪ್ ಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಆದರೆ ಒಂದು ರೂಪಾಯಿ ಪಡೆಯದೇ ಚಿರಂಜೀವಿ ನಟಿಸಿರೋದು ಮೂಲಗಳ ಪ್ರಕಾರ ನಿಜ ಎಂದು ಹೇಳಲಾಗುತ್ತಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]