ವಿಜಯಪುರ: ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ನಟೋರಿಯಸ್ ಹಂತಕ ಬಾಗಪ್ಪನ ಬರ್ಬರವಾಗಿ ಹತ್ಯೆಯಾಗಿದೆ. ಕೊಡಲಿಯಿಂದ ಬಾಗಪ್ಪನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾರೆ.
ಗುಂಡು ಸದ್ದು ಕೂಡ ಸ್ಥಳೀಯರಿಗೆ ಕೇಳಿಸಿದೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದ ಮದೀನಾ ನಗರದಲ್ಲಿ ಬಾಡಿಗೆಗೆ ಬಾಗಪ್ಪ ವಾಸವಿದ್ದ. ರಾತ್ರಿ 9:30 ರ ಸುಮಾರಿಗೆ ಆಟೋದಲ್ಲಿ ನಾಲ್ಕೈದು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.
Advertisement
ಊಟ ಮಾಡಿ ಮನೆ ಎದುರು ಬಾಗಪ್ಪ ವಾಕಿಂಗ್ ಮಾಡ್ತಿದ್ದ ವೇಳೆ ಹತ್ಯೆಯಾಗಿದೆ. ಊಟ ಮಾಡಿಕೊಂಡು ಮನೆ ಎದುರು ಅಡ್ಡಾಡುತ್ತಿದ್ದ ವೇಳೆ ಮಾರಕಾಸ್ತ್ರ ಹಾಗೂ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
Advertisement
ಎಷ್ಟು ಜನರು ಬಂದಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಮನೆಯವರು ನೀಡಿದ ಮಾಹಿತಿ ಆಧರಿಸಿ ಹೇಳ್ತಿದ್ದೇನೆ. ಕರೆಂಟ್ ಕಟ್ ಮಾಡಿ ಹತ್ಯೆ ಮಾಡಿದ್ದ ಬಗ್ಗೆ ಮಾಹಿತಿ ಇಲ್ಲ. ಸಂಬಂಧಿಕರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.
Advertisement
ಬಾಗಪ್ಪ ಮೇಲೆ 10 ಕೇಸ್‌ಗಳಿವೆ. ಈ ಪೈಕಿ 6 ಮರ್ಡರ್ ಕೇಸ್ ಇವೆ. 1993 ರಿಂದ ಬಾಗಪ್ಪನ ಕ್ರಿಮಿನಲ್ ಹಿಸ್ಟರಿ ಶುರುವಾಗಿದೆ. 2016-17ರಲ್ಲಿ ಬಾಗಪ್ಪನ ಮೇಲೆ ಸೆಕ್ಯೂರಿಟಿ ಕೇಸ್ ಹಾಕಲಾಗಿತ್ತು. ಸದ್ಯ ಎಲ್ಲ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ಟೀಂ ತಂಡವಾಗಿ ಕೆಲಸ ಮಾಡ್ತಿದೆ ಎಂದು ತಿಳಿಸಿದ್ದಾರೆ.