ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ್ ಪರ, ವಿರುದ್ಧ ಚರ್ಚೆಗಳು ನಡೆಯುತ್ತಿರುವಾಗಲೇ ದೊರೆಸ್ವಾಮಿ ಅವರು ವೀರ ಸಾವರ್ಕರ್ ಬಗ್ಗೆ ಆಡಿದ ಮಾತು ಕಿಚ್ಚು ಎಬ್ಬಿಸಿದೆ. ದೊರೆಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ದೊರೆಸ್ವಾಮಿ ಸಾವರ್ಕರ್ ರೋಮಕ್ಕೂ ಸಮನಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾವರ್ಕರ್ ಅಂದ್ರೆ ಸ್ಪೂರ್ತಿ, ಕಿಚ್ಚು, ಕ್ರಾಂತಿ. ಧೀಮಂತ ಸಾವರ್ಕರ್ ಬಗ್ಗ ದೊರೆಸ್ವಾಮಿ ಹೇಳಿಕೆ ಖಂಡನೀಯ. ದೊರೆಸ್ವಾಮಿ ಸ್ವಯಂ ಘೋಷಿತ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯ ಹೋರಾಟಗಾರ ಅನ್ನೋ ಟ್ರಂಪ್ ಕಾರ್ಡ್ ಬಳಸಿಕೊಂಡು ದೇಶದ್ರೋಹಿಗಳ ಜೊತೆ ಕುಳಿತು ಪ್ರತಿಭಟನೆ ಮಾಡೋದು ಹೋರಾಟ ಅಂದುಕೊಂಡಿದ್ದಾರೆ. ದೊರೆಸ್ವಾಮಿಗೆ ಯಾವ ನೈತಿಕತೆ ಕೂಡ ಇಲ್ಲ ಅಂತ ಆಕ್ರೋಶ ಹೊರ ಹಾಕಿದರು.
Advertisement
Advertisement
ದೊರೆಸ್ವಾಮಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ ಎಂದು ಹೇಳುತ್ತಾರೆ. ಅವರಾಗಿಯೇ 101 ವರ್ಷವಾಗಿದೆ ಅಂತ ಹೇಳಿಕೊಳ್ತಾರೆ. ಗಾಂಧೀಜಿಯವರು ಹೋರಾಟ ನಡೆಸಿದಾಗ ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಉತ್ತರ ಕರ್ನಾಟಕದ ಮನೆ ಮನೆಗಳಲ್ಲೂ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಅಂತ ತಿಳಿಸಿದರು.
Advertisement
ಇದೇ ವೇಳೆ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಅವರು ಅಡ್ರೆಸ್ ಇಲ್ಲದಿರುವ ಪಕ್ಷಗಳು ದೊರೆಸ್ವಾಮಿ ಜೊತೆ ನಿಲ್ಲುವುದು ಸೂಕ್ತವಲ್ಲ. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕೆ ಯಾವುದಾದರೂ ದಾಖಲೆ ಇದ್ಯಾ? ಕನಿಷ್ಟ ಬ್ರಿಟಷರ ಬಳಿಯಾದರೂ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕೆ ದಾಖಲೆ ಇದೆಯಾ ಅಂತ ಪ್ರಶ್ನೆ ಮಾಡಿದ್ರು. ಅಡ್ರೆಸ್ ಇಲ್ಲದಿರುವ ನಿರಾಶ್ರಿತರು ದೊರೆಸ್ವಾಮಿಗೆ ಬೆಂಬಲ ನೀಡುವಾಗ ಯೋಚನೆ ಮಾಡಲಿ ಅಂತ ಕಾಂಗ್ರೆಸ್ಸಿಗೆ ಕುಟುಕಿದರು. ಸಾವರ್ಕರ್ ತಂಟೆಗೆ ಬಂದರೆ ಯಾವ ದೊಣ್ಣೆ ನಾಯಕನಾದರೂ ನಾವು ಸುಮ್ಮನಿರುವುದಿಲ್ಲ. ಕೂಡಲೇ ದೊರೆಸ್ವಾಮಿ ಸಾವರ್ಕರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.