Bengaluru City

ಭೀಮಾನಾಯ್ಕ್ ಕಾರ್ ಚಾಲಕ ರಮೇಶ್ ಆತ್ಮಹತ್ಯೆ ಕೇಸ್‍ಗೆ ಟ್ವಿಸ್ಟ್

Published

on

Share this

– ಚೀಟಿ ಬರೆದಿರೋ ನನ್ಮಗ ಉಳಿದಿಲ್ಲ, ನಾನು ನಾಗರಹಾವು ಎಂದ ಭೀಮಾನಾಯ್ಕ್

ಬಳ್ಳಾರಿ: ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಅವರ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಮಂಡ್ಯ ಮೂಲದ ಕಾರ್‍ಡ್ರೈವರ್ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ದೊಡ್ಡ ಟಿಸ್ಟ್ ದೊರೆತಿದೆ.

ಬೆಂಗಳೂರು ವಿಶೇಷ ಭೂಸ್ವಾಧಿನಾಧಿಕಾರಿ ಭೀಮಾನಾಯ್ಕ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡುವ ಮುನ್ನವೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಬಚ್ಚಿಟ್ಟಿದ್ದು ಇದೀಗ ಬೆಳಕಿಗೆ ಬಂದಿದೆ. ಅಷ್ಟೆ ಅಲ್ಲ ಸಂಬಂಧಿಕರ ಮನೆಯಲ್ಲಿ ಭೀಮಾನಾಯ್ಕ್ ಬಚ್ಚಿಟ್ಟಿದ್ದ ಬಂಗಾರದ ಒಡವೆಗಳು ಹಾಗೂ ವಜ್ರದ ಉಂಗುರುಗಳು ಕಳ್ಳತನವಾಗಿರುವ ಬಗ್ಗೆ ದೂರು ಸಹ ದಾಖಲಾಗಿದೆ. ಜೊತೆಗೆ ದೂರಿನ ಬಳಿಕ ಕಳ್ಳತನದ ಆರೋಪ ಹೊತ್ತಿರುವವರಿಗೆ ಭೀಮಾನಾಯ್ಕ್ ಆಭರಣಗಳನ್ನು ಕೊಡುವಂತೆ ಧಮ್ಕಿ ಹಾಕಿದ್ದಾರೆ. ತನ್ನ ಬಗ್ಗೆ ಚೀಟಿ ಬರೆದವರನ್ನೇ ಬಿಟ್ಟಿಲ್ಲ ನಿಮ್ಮನ್ನ ಬಿಡುತ್ತೇನಾ ಎಂದಿದ್ದು, ಕಾರು ಚಾಲಕ ರಮೇಶ್ ಸಾವು ಆತ್ಮಹತ್ಯೆ ಅಲ್ಲ, ಹತ್ಯೆ ಎಂಬ ಅನುಮಾನ ಮೂಡಿಸಿದೆ.

ಪಬ್ಲಿಕ್ ಟಿವಿಗೆ ಸಿಕ್ಕಿರುವ ಆಡಿಯೋದಿಂದ ಈ ಅನುಮಾನ ಮೂಡುವಂತಾಗಿದೆ. ಅಲ್ಲದೆ ಡಿಸೆಂಬರ್‍ನಲ್ಲಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತನೋಟ್‍ ನಲ್ಲಿ ಉಲ್ಲೇಖಿಸಿದ್ದ ವಜ್ರದ ಒಡವೆಗಳ ಮಾಹಿತಿ ಇದೀಗ ಬಹಿರಂಗವಾಗಿದೆ. ಚಾಲಕನ ಆತ್ಮಹತ್ಯೆ ನಂತರ ಎಸಿಬಿ ಅಧಿಕಾರಿಗಳು ಭೀಮಾನಾಯ್ಕ್ ಮನೆ ಮೇಲೆ ದಾಳಿ ಮಾಡುವ ಮನ್ಸೂಚನೆ ಸಿಕ್ಕಿ, ಕೋಟಿ ರೂಪಾಯಿ ಮೌಲ್ಯದ ಬಂಗಾರದ ಒಡವೆಗಳು ವಜ್ರದ ಉಂಗುರುಗಳನ್ನ ತನ್ನ ಸಂಬಂಧಕರ ಮನೆಯಲ್ಲಿ ಬಚ್ಚಿಟ್ಟಿದ್ದರು. ಆದ್ರೆ ಬಚ್ಚಿಟ್ಟ ಆಭರಣ ಕಳುವಾಗಿ ಈಗ ಆಭರಣ ಬಚ್ಚಿಟ್ಟವರಿಗೆ ಧಮ್ಕಿ ಹಾಕಿ ಭೀಮಾನಾಯ್ಕ್ ಸಿಕ್ಕಿಬಿದ್ದಿದ್ದಾರೆ.

ಆಡಿಯೋದಲ್ಲೇನಿದೆ?: ಹೋಗ್ತಿರೋ ಹಾವನ್ನ ಬಿಟ್ಟು ಬಿಡು. ಮುಂದೆ ಅಡ್ಡ ಹಾಕಬೇಡ, ಕಚ್ಚೋ ಹಾಗೆ ಮಾಡಬೇಡ. ನಾಗರಹಾವು ಹಿಂದೆ ತಿರುಗಿದ್ರೆ ಆಮೇಲೆ ತೋರಿಸ್ತೀನಿ ಭೀಮಾ ಏನ್ ಅಂತಾ. ನೀನ್ ವಾಪಸ್ ಕೊಡದೆ ಇದ್ದರೂ ಸರ್ವನಾಶ ಆಗಿ ಹೋಗ್ತೀರಾ. ಬರೀ ನನ್ನ ಮೇಲೆ ಚೀಟಿ ಬರೆದಿರೋ ನನ್ಮಗ ಉಳಿದಿಲ್ಲ. (ಡ್ರೈವರ್ ರಮೇಶ್ ಬಗ್ಗೆ?) ಅದರ ಮೇಲೆ ತಿಳಕೋ ಭೀಮಾನಾಯ್ಕ್ ತಾಕತ್ತು ಏನು ಅಂತಾ ಎಂದೆಲ್ಲಾ ಖುದ್ದು ಭೀಮಾನಾಯ್ಕ್ ತನ್ನ ಮಾವ ಸೇವಾನಾಯ್ಕ್ ಜೊತೆ ಮರಾಠಿ ಭಾಷೆಯಲ್ಲಿ ಫೋನಲ್ಲಿ ಹೇಳಿದ್ದಾರೆ. ಧಮ್ಕಿ ಹಾಕೋ ಭರದಲ್ಲಿ ರಮೇಶ್ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ಮೂಡುವಂತೆ ಭೀಮಾನಾಯ್ಕ್ ಮಾತನಾಡಿದ್ದಾರೆ.

ಏನಿದು ಪ್ರಕರಣ?: ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಕಾರು ಚಾಲಕ ಮಂಡ್ಯ ಮೂಲದ ರಮೇಶ್ ಡಿ.4ರಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾ ನಾಯ್ಕ್ ಮತ್ತು ಅವರ ಕಾರು ಚಾಲಕ ಮಹಮ್ಮದ್ ಅವರಿಂದ ಜೀವಬೆದರಿಕೆ ಇದೆ ಎಂದು ಡೆತ್‍ನೋಟ್‍ನಲ್ಲಿ ಆರೋಪಿಸಿದ್ದರು. ಅಲ್ಲದೆ ಗಾಲಿ ಜನಾರ್ದನ ರೆಡ್ಡಿ ಮಗಳ ಮದುವೆಗಾಗಿ ಭೀಮಾ ನಾಯ್ಕ್ ಸುಮಾರು 100 ಕೋಟಿ ರೂ. ಹಳೆ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತಿಸಿ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಡಿಸೆಂಬರ್ 6 ರಿಂದ ನಾಪತ್ತೆಯಾಗಿದ್ದ ಭೀಮಾನಾಯಕ್‍ರನ್ನು ಪೊಲೀಸರು ಕಲಬುರಗಿಯಲ್ಲಿ ಬಂಧಿಸಿದ್ದರು.ನಂತರ ಭೀಮಾನಾಯ್ಕ್ ಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.

https://www.youtube.com/watch?v=p4mpbMsTGbo

ಭೀಮಾನಾಯ್ಕ್ : ಇದೇನಂತ ಒಂದೇ ಮಾತಲ್ಲಿ ಹೇಳ್ತೀನಿ… ಒಂದು ಒಂದ್ ಮಾತಲ್ಲಿ ಹೇಳಿ ಹೋಗೇನಿ.. ಏನೋ ಇದೆ ಅಂತಾ.. ಯಾರದೂ ಏನ್ ಏನೋ ಆಗಿದೆ ಅಂತಾ. ಕುಡಿಕೆಯಲ್ಲಿ ಇರೋ ಕಲ್ಲು ಕುಡಿಕೆಯಲ್ಲಿ ಇರೋ ಹಾಗೆ ಸರಿ ಮಾಡಿ ಹೊರಗೆ ಬಂದ್ರೆ ಒಳ್ಳೆಯದು. ಹೋಗ್ತಿರೋ ಹಾವಿಗೆ ಬಿಟ್ಟು ಬಿಡು, ಮುಂದೆ ಅಡ್ಡ ಹಾಕಬೇಡ, ಕಚ್ಚೋ ಹಾಗೆ ಮಾಡಬೇಡ.
ಸೇವಾನಾಯ್ಕ್ : ನಾನು ಏನ್ ಅಡ್ಡ ಹಾಕ್ತಿಲ್ಲ.
ಭೀಮಾನಾಯ್ಕ್ : ಅಷ್ಟೇ.. ಇಲ್ಲಿ ಕೇಳು, ನಾಗರಹಾವು ಹಿಂದೆ ತಿರುಗಿದ್ರೆ ಆಮೇಲೆ ತೋರಿಸ್ತೀನಿ… ಭೀಮಾ ಏನ್ ಅಂತಾ..
ಸೇವಾನಾಯ್ಕ್ : ಈಗ
ಭೀಮಾನಾಯ್ಕ್ : ಈಗ ಸಾಕು.. ಆಮೇಲೆ ಮಾತನಾಡ್ತೇನೆ..
ಸೇವಾನಾಯ್ಕ್ : ನೀವ್ ಏನ್ ಮಾಡಿದ್ರೂ.. ನಾನ್ ಏನ್ ಮಾಡೋ ಹಾಗಿದನಪ್ಪಾ
ಭೀಮಾನಾಯ್ಕ್ : ನಾನು ಏನ್ ಮಾಡ್ತಿಲ್ಲ.. ನಾನು ಹೇಳ್ತಿರೋದು ನಿಜಾ. ತಗೊಂಡು ಹೋಗಿರೋದು ನಿಜಾ.. ಇಟ್ಟಿರೋದು ನಿಜಾ.. ಅವೆಲ್ಲಾ ಆಗಿದೆ. ಇದರ ಮೇಲೆ ನಿನ್ನ ಇಚ್ಛೆ, ದೇವರ ಇಚ್ಛೆ,
ಆ ಸಾಮಾನುಗಳನ್ನು ತಮಿಳುನಾಡು, ಕೇರಳದಲ್ಲಿ ಭವಾನಿ ಮುಂದೆ ಇಟ್ಟು ಪ್ರತಿಷ್ಠಾಪನೆ ಮಾಡಿರುವಂತ ಸಾಮಾನುಗಳು ಅವು.
ಸೇವಾನಾಯ್ಕ್ : ಹ್ಞಾ..
ಭೀಮಾನಾಯ್ಕ್ : ನೀನ್ ವಾಪಸ ಕೊಡದೆ ಇದ್ದರೂ ಸರ್ವನಾಶ ಆಗಿ ಹೋಗ್ತೀರಾ. ಬರೀ ನನ್ನ ಮೇಲೆ ಚೀಟಿ ಬರೆದಿರೋ ನನ್ಮಗ ಉಳಿದಿಲ್ಲ (ಡ್ರೈವರ್ ರಮೇಶ್ ಬಗ್ಗೆ..?) ಅದರ ಮೇಲೆ ತಿಳಕೋ ಭೀಮಾನಾಯ್ಕ್ ತಾಕತ್ತು ಏನೂ ಅಂತಾ
ಸೇವಾನಾಯ್ಕ್: ಹ್ಞಾ..
ಭೀಮಾನಾಯ್ಕ್ : ಆದ್ರೆ ಅದೂ ಸಿದ್ದಿ ಆಗಿರುವಂತಹ ಸಾಮಾನು.. ಸಿದ್ಧಿ ಆಗಿರೋ ಸಾಮಾನು ದೇವರ ಹೊತ್ತಿರೋ ಮನುಷ್ಯ ನೀನು.. ಅದರ ಮೇಲೆ ತಾಯಿ ನೆರಳಿದೆ.. ತಾಯಿ ಕೊರಳಲ್ಲಿ ಹಾಕಿ ಹೋಮ ಹವನ ಮಾಡಿಸಿ ನನ್ನ ಕೊರಳಲ್ಲಿ ಹಾಕಿರುವಂತಹದ್ದೂ ಆ ಸಾಮಾನು. ಆ ಸಾಮಾನ್ ಎಲ್ಲೂ ವಾಪಸ ಹೋಗಲ್ಲ. ಅದೂ ಬಹಳ ಸಿದ್ದಿ ಆಗಿರುವಂಥದ್ದು. ಆ ಸಾಮಾನು ತಗೊಂಡಿರೋರಿಗೆ.. ಇಟ್ಟಿರೋರಿಗೆ ಆ ತಾಯಿ ಬಿಡಲ್ಲ.. ನಾನು ಬಿಡ್ತೀನಿ.. ಆದ್ರೆ, ಆ ತಾಯಿ ಬಿಡಲ್ಲ..
ಸೇವಾನಾಯ್ಕ್ : ನಾನು ಹೇಳ್ತಿದ್ದೀನಲ್ಲ.. ನಿಂದೂ ಇರೋದಿದ್ರೆ ಸಿಗೋದಾದ್ರೆ ನಿನಗೆ ಸಿಗುತ್ತೆ ಅದು..
ಭೀಮಾನಾಯ್ಕ್ : ಅದೂ ನನ್ನ ಗ್ರಹಗತಿ ಇಟ್ಟುಕೊಂಡು ಸಿದ್ದಿ ಮಾಡಿಸಿದ ಉಂಗುರಗಳು, ನನ್ನ ಕೊರಳಲ್ಲಿ ತಾಯಿ ಮೂರ್ತಿಯಿದೆ. ಚೈನ್ ಇದೆ, ಅದನ್ನೂ ನಾನು ಸಿದ್ದಿ ಮಾಡಿಸಿದೇನಿ, ಅದನ್ನ ಮುಟಿದ್ರೆ ಅದೂ ಕರೆಂಟ್ ಶಾಕ್ ಹೊಡದಂಗೆ ಆಗುತ್ತೆ. ಅದು ಆ ತಾಯಿನಾ ನಿಲ್ಲಿಸೋ ತಾಕತ್ತ ಇದೇನಾ.

Click to comment

Leave a Reply

Your email address will not be published. Required fields are marked *

Advertisement
Advertisement