ಧಾರವಾಡ: ಹಿಂದೂ ಎಂಬ ಪದ ಅಶ್ಲೀಲವಾದದ್ದು ಎಂಬ ಹೇಳಿಕೆ ಕೊಟ್ಟಿದ್ದ ಶಾಸಕ ಸತೀಶ್ ಜಾರಕಿಹೊಳಿಗೆ (Satish Jarkiholi) ಬಿಜೆಪಿ ಯುವ ಮುಖಂಡ ಭೀಮಾಶಂಕರ್ ಪಾಟೀಲ್ (Bheema Shankar Patil) ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಬೆಳಗಾವಿಯ (Belgavi) ರಾಜಕಾರಣಿಯೊಬ್ಬರು ಉಡಾಫೆಯಿಂದ ಮಾತನಾಡುತ್ತಾರೆ. ನಾನು ಅದನ್ನು ಖಂಡಿಸುತ್ತೇನೆ. ತಾಯಿ, ಮಗಳ ವ್ಯತ್ಯಾಸ ಗೊತ್ತಿಲ್ಲದವರಿಂದ ಇಂತ ಮಾತು ಬರಲು ಸಾಧ್ಯ. ಭಾರತದ ಕೋಟ್ಯಂತರ ಜನ ಹಿಂದೂ ಜೀವನ ಪದ್ಧತಿಯೇ ಧರ್ಮ ಎಂದು ಸ್ವೀಕಾರ ಮಾಡಿದ್ದಾರೆ. ಆ ಧರ್ಮಕ್ಕೆ ಅಶ್ಲೀಲ ಎಂಬ ಪದ ಜೋಡಿಸಿದ ವ್ಯಕ್ತಿಯ ನಾಲಿಗೆ ಶುದ್ಧಗೊಳಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ರಾಜಕಾರಣದ ತೆವಲಿಗಾಗಿ, ಮತಬ್ಯಾಂಕ್‍ಗಾಗಿ, ಇನ್ಯಾರನ್ನೋ ತೃಪ್ತಿಪಡಿಸಲು ಧರ್ಮದ ದ್ವೇಷ ಬಿತ್ತುವ ರಣ ಹೇಡಿಗಳಿಂದ ಹಿಂದುತ್ವ ಪಾಠ ಕಲಿಯುವ ಅಗತ್ಯವಿಲ್ಲ. ಹಿಂದೂ ಧರ್ಮಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ. ವೇದ ಪುರಾಣಗಳ ದಾಖಲೆ ಇವೆ. ಯಾರೋ ಎಡಬಿಡಂಗಿಗಳು ಅದನ್ನು ವಿವಾದಾತ್ಮಕವಾಗಿ ಮಾತನಾಡುವುದು ಸಮಾಜಕ್ಕೆ ದೊಡ್ಡ ಕೆಟ್ಟ ಸಂದೇಶ ಕೊಟ್ಟಂತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿನ್ನ ಯಾರು ಮದುವೆ ಆಗ್ತಾರೆ ಎಂದು ಗೇಲಿ ಮಾಡಿದವರಿಗೆ ಗೀತಾ ಭಟ್ ಖಡಕ್ ಉತ್ತರ
Advertisement
Advertisement
ಇಂತವರೆಲ್ಲ ವೈಚಾರಿಕ ಭಯೋತ್ಪಾದಕರು, ವೈಚಾರಿಕ ಹೆಸರಿನಲ್ಲಿ ಭಯೋತ್ಪಾದಕ ಕೆಲಸ ಮಾಡುವ ತಂಡ ಇದು. ಹೀಗಾಗಿ ಈ ತಂಡದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹಿಂದೂ ಧರ್ಮದ ಕೂದಲೆಳೆಯನ್ನು ಕೂಡ ಅವರಿಂದ ಅಲ್ಲಾಡಿಸಲು ಆಗುವುದಿಲ್ಲ. ಅಂತಹ ಸಂದರ್ಭ ಬಂದರೆ ನಾವು ಅದಕ್ಕೆ ಸರಿಯಾದ ಉತ್ತರ ಕೊಡಲು ತಯಾರಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಸ್ಫೋಟದ ತನಿಖೆ NIA ಹೆಗಲಿಗೆ : ನಳಿನ್ ಕುಮಾರ್ ಕಟೀಲ್