ಜೈಪುರ: ಕಳೆದ ತಿಂಗಳು ರಾಜಸ್ಥಾನದಲ್ಲಿ ಶಿಕ್ಷಕನಿಂದ ಹತ್ಯೆಗೀಡಾದ ದಲಿತ ಬಾಲಕನ ಕುಟುಂಬವನ್ನು ಭೇಟಿಯಾಗಲು ಹೋಗುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಬಂಧನಕ್ಕೊಳಗಾದಾಗ ಚಂದ್ರಶೇಖರ್ ಆಜಾದ್ ರಾಜಸ್ಥಾನದ ಜಲೋರ್‌ಗೆ ತೆರಳುತ್ತಿದ್ದರು. ಈ ಹತ್ಯೆಯು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಭಾರೀ ಆಕ್ರೋಶ ಮತ್ತು ರಾಜಕೀಯ ಹಿನ್ನಡೆಯನ್ನು ಉಂಟುಮಾಡಿದೆ. ಇದನ್ನೂ ಓದಿ: ಪಾತ್ರೆಯಲ್ಲಿದ್ದ ನೀರು ಕುಡಿದ ದಲಿತ ಬಾಲಕನಿಗೆ ಥಳಿಸಿ ಕೊಂದ ಶಿಕ್ಷಕ
Advertisement
Advertisement
ಜುಲೈ 20 ರಂದು ಒಂಬತ್ತು ವರ್ಷದ ದಲಿತ ಸಮುದಾಯದ ಬಾಲಕ, ಮೇಲ್ಜಾತಿಯವರು ಬಳಸುವ ಪಾತ್ರೆಯಲ್ಲಿ ನೀರು ಕುಡಿದ ಕಾರಣಕ್ಕೆ ಶಿಕ್ಷಕನಿಂದ ಥಳಿಸಲ್ಪಟ್ಟು ಸಾವನ್ನಪ್ಪಿದ್ದ. ಥಳಿತದಿಂದಾಗಿ ಮಗುವಿನ ಕಣ್ಣು ಮತ್ತು ಕಿವಿಗೆ ಗಾಯವಾಗಿತ್ತು. ಗುಜರಾತ್‌ನ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಬಾಲಕ ನಿಧನ ಹೊಂದಿದ್ದ.
Advertisement
Advertisement
ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಶಿಕ್ಷಕನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಭಾರತದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಮುದಾಯದವರನ್ನು ರಕ್ಷಿಸುವ ಕಟ್ಟುನಿಟ್ಟಿನ ಕಾನೂನಿನಡಿಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ