ಶಿವಮೊಗ್ಗ: ಇಂದು ಭೀಮನ ಅಮವಾಸ್ಯೆ (Bheemana Amavasy) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೊಜೆ ಸಲ್ಲಿಸುತ್ತಿದ್ದಾರೆ. ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಭೀಮನ ಅಮವಾಸ್ಯೆ ವ್ರತ ಆಚರಿಸುತ್ತಿದ್ದಾರೆ.
ಅದರಂತೆಯೇ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ (Sigandur Chowdeshwari Temple) ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೇವಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಅಮವಾಸ್ಯೆ ಹಿನ್ನೆಲೆ ಭಕ್ತರು ಸಹಸ್ರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
Advertisement
Advertisement
ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದು ಕರೆಯಲಾಗುವ ಭೀಮನ ಅಮವಾಸ್ಯೆ ವ್ರತವು ದಕ್ಷಿಣ ಭಾರತದಲ್ಲಿ ಅತ್ಯಂತ ಮಂಗಳಕರವಾದ ವ್ರತವಾಗಿದೆ. ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳಲ್ಲಿ, ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯ ರಾತ್ರಿಯಲ್ಲಿ ಮಹಿಳೆಯರು ಈ ಉಪವಾಸವನ್ನು ಆಚರಿಸುತ್ತಾರೆ. ಇದನ್ನೂ ಓದಿ: ನಾರಾಯಣಮೂರ್ತಿ ದಂಪತಿಯಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ
Advertisement
Advertisement
ಆಷಾಢ ಮಾಸವು ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ಆರಂಭದ ಸಮಯವಾಗಿದೆ. ಈ ವರ್ಷ ಭೀಮನ ಅಮಾವಾಸ್ಯೆಯನ್ನ 2023ರ ಜುಲೈ 17 ರಂದು ಸೋಮವಾರ ಆಚರಿಸಲಾಗುವುದು. ಈ ವ್ರತವನ್ನು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ವ್ರತವಾಗಿದ್ದು, ದಂಪತಿಗಳು ಈ ದಿನ ಶಿವ – ಪಾರ್ವತಿ ಪೂಜೆಯನ್ನು ಮಾಡುತ್ತಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು
ಭೀಮನ ಅಮಾವಾಸ್ಯೆ ಮಹತ್ವ ಗೊತ್ತಾ?
ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ವಿವಾಹಿತ ಮಹಿಳೆಯರು ಮದುವೆಯಾದ ನಂತರ ಕನಿಷ್ಠ 9 ವರ್ಷಗಳ ಕಾಲ ಈ ವ್ರತವನ್ನು ಮಾಡುತ್ತಾರೆ. ಇನ್ನೂ ಅವಿವಾಹಿತ ಹುಡುಗಿಯರು ಸದ್ಗುಣಶೀಲ ಪತಿಯನ್ನ ಪಡೆಯುವುದಕ್ಕಾಗಿ, ಸಹೋದರರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ.
Web Stories