ಲಕ್ನೋ: ಉತ್ತರಪ್ರದೇಶದ (Uttar Pradesh ) ಬಹ್ರೇಚ್ ಜಿಲ್ಲೆಯನ್ನು ತತ್ತರಿಸುವಂತೆ ಮಾಡಿರುವ ನರಭಕ್ಷಕ ತೋಳಗಳ (Man-Eating Wolves) ವಿಚಾರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ (CM Yogi Adityanath Govt ) ಮಹತ್ವದ ನಿರ್ಣಯ ತೆಗೆದುಕೊಂಡಿದೆ. ತೋಳಗಳ ಹತ್ಯೆಗೆ ಕಂಡಲ್ಲಿ ಗುಂಡಿಕ್ಕಲು (Shoot-at-Sight) ಆದೇಶ ನೀಡಿದೆ.
ಈ ಭಾಗದಲ್ಲಿ ಒಟ್ಟು ಆರು ತೋಳ ಸಂಚರಿಸುತ್ತಿದ್ದವು. ಆಪರೇಷನ್ ಭೇಡಿಯಾ ಭಾಗವಾಗಿ ನಾಲ್ಕು ತೋಳ ಸೆರೆಹಿಡಿಯಲಾಗಿತ್ತು. ಆದರೆ ಉಳಿದ ಎರಡು ತೋಳಗಳು ಸಿಗುತ್ತಿಲ್ಲ. ಸೋಮವಾರ ರಾತ್ರಿಯೂ ತೋಳದ ದಾಳಿಗೆ ಬಾಲಕಿ ಗಾಯಗೊಂಡಿದ್ದಾಳೆ. ಈವರೆಗೂ ತೋಳದ ದಾಳಿಗೆ 9 ಮಕ್ಕಳು ಸೇರಿ, 10 ಮಂದಿ ಬಲಿಯಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – 9 ನಕ್ಸಲರನ್ನು ಬೇಟೆಯಾಡಿದ ಭದ್ರತಾ ಪಡೆ
Advertisement
Advertisement
#WATCH | #Bahraich, Uttar Pradesh: In view of the wolf attacks, residents of Kulaila village are becoming aware and carrying out patrolling with sticks to guard themselves.#WolfAttack #UttarPradesh pic.twitter.com/TjQy7FjP1Y
— TIMES NOW (@TimesNow) September 3, 2024
Advertisement
ತೋಳಗಳನ್ನು ಪತ್ತೆಹಚ್ಚಲು, ಅರಣ್ಯ ಇಲಾಖೆ ಮತ್ತು ಉತ್ತರ ಪ್ರದೇಶ ಪೊಲೀಸರು ‘ಆಪರೇಷನ್ ಭೇಡಿಯಾ’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಪ್ರದೇಶವನ್ನು ಏಳು ವಲಯಗಳಾಗಿ ವಿಂಗಡಿಸಲಾಗಿದ್ದು, ಅಧಿಕಾರಿಗಳು ನಿಗಾ ವಹಿಸಿದ್ದಾರೆ.
Advertisement
ಪ್ರತಿ ಗ್ರಾಮ ಪಂಚಾಯಿತಿಗೂ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಖಂಡಿತವಾಗಿಯೂ ಶೀಘ್ರದಲ್ಲೇ ನಾವು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುತ್ತೇವೆ ಎಂದು ಗೋರಖ್‌ಪುರ ವಲಯದ ಎಡಿಜಿ ಕೆಎಸ್ ಪ್ರತಾಪ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು – ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಜಮೆಯಾಗದ ಸಂಬಳ